ಬೆಳಗಾವಿ: ಸಾಮಾನ್ಯವಾಗಿ ಪೊಲೀಸರು ಎಂದರೇ ಬೈಯುವರೇ ಹೆಚ್ಚು, ಆದರೆ ಬೆಳಗಾವಿ ಜಿಲ್ಲೆಯ ಅಥಣಿ ಪೋಲಿಸರು ಮಾನವೀಯತೆ ಮೆರೆದು ಜನತೆಯಿಂದ ಬೇಶ್ ಅನಿಸಿಕೊಂಡಿದ್ದಾರೆ.

ಸಂಕೇಶ್ವರ-ವಿಜಯಪುರ ರಾಜ್ಯ ಹೆದ್ದಾರಿಯ ಕರಿ ಮಸೂತಿ ಸಮೀಪದಲ್ಲಿ ಕಾರು ಬೈಕ್ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರರು ತೀವ್ರವಾಗಿ ಗಾಯಗೊಂಡಿದ್ದರು. ಈ ವೇಳೆ ಅಂಬುಲೆನ್ಸ್ ಬಾರದ ಕಾರಣ ಗಸ್ತು ತಿರುಗುತ್ತಿದ್ದ ಪೊಲೀಸರು ತಾವೇ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲು ಮಾಡಿ ಮಾನವೀಯತೆ ಮೆರೆದಿದ್ದಾರೆ.
ಪೊಲೀಸ್ ಸಿಬ್ಬಂದಿ ಜಿ, ಎನ್, ದೊಡಮನಿ, ಪಿ ಎಸ್ ಮಲಗೌಡರ ಹಾಗೂ ಗಿರಿಮಲ್ಲ ಆಜುರ ಅವರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಹಾಗೂ ಅಥಣಿ ಜನರಿಂದ ಪ್ರಶಂಸೆಯ ಹರಿದು ಬಂದಿದೆ.
Laxmi News 24×7