ಬೆಳಗಾವಿ : ಉಕ್ರೇನ್ನ ಯುದ್ಧ ಭೂಮಿಯಿಂದ ಸುರಕ್ಷಿತವಾಗಿ ಬೆಳಗಾವಿಗೆ ಆಗಮಿಸಿದ ವಿದ್ಯಾರ್ಥಿನಿ ಬ್ರಾಹ್ಮಿ ಮನೋಜ ಪಾಟೀಲ್ ಅವರನ್ನು, ಸಚಿವ ಉಮೇಶ ಕತ್ತಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
ಚಿಕ್ಕೋಡಿ ತಾಲೂಕಿನ ಬ್ರಾಹ್ಮಿ ದೆಹಲಿ, ಬೆಂಗಳೂರು ಮಾರ್ಗವಾಗಿ ಬೆಳಗಾವಿಗೆ ಆಗಮಿಸಿದರು. ಎಂಬಿಬಿಎಸ್ ಪ್ರಥಮ ವರ್ಷದ ವಿದ್ಯಾರ್ಥಿನಿ ಆಗಿರುವ ಬ್ರಾಹ್ಮಿ ಪಾಟೀಲ್, ಉಕ್ರೇನ್ ದೇಶದ ಚರ್ನಿವೇಸ್ಟ್ ನ ಬೊಕೊ ಯುನಿಯನ್ ಸ್ಟೇಟ್ ಮೆಡಿಕಲ್ ವಿವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಯುದ್ಧ ಘೋಷಣೆಯಾದ ಹಿನ್ನೆಲೆ ಉಕ್ರೇನ್ನ ಯುದ್ಧ ಪ್ರದೇಶ ಕೀವ್ ಏರ್ ಪೋರ್ಟ್ ನಲ್ಲಿ ಸಿಲುಕಿದ್ದರು. ಇದೀಗ ಸುರಕ್ಷಿತವಾಗಿ ಆಗಮಿಸಿದ ಬ್ರಾಹ್ಮಿ ಅವರನ್ನು ಕಂಡು ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದರು.