ಕೀವ್(ಉಕ್ರೇನ್): ಉಕ್ರೇನ್‌ನಲ್ಲಿ ಕಳೆದ ವಾರ ಜಪೋರಿಜ್ಜ್ಯಾ ಪರಮಾಣು ಸ್ಥಾವರವನ್ನು ವಶಪಡಿಸಿಕೊಂಡ ನಂತರ ರಷ್ಯಾದ ಪಡೆಗಳು ಮತ್ತೊಂದು ಪರಮಾಣು ಸ್ಥಾವರವನ್ನು ವಶಪಡಿಸಿಕೊಳ್ಳುವ ಪ್ಲಾನ್ ಹೊಂದಿವೆ ಎಂದು ಕೀವ್‌ನ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆಉಕ್ರೇನಿಯನ್ ಅಧ್ಯಕ್ಷರ ಕಚೇರಿಯ ಮುಖ್ಯಸ್ಥರ ಸಲಹೆಗಾರ ಅಲೆಕ್ಸಿ ಅರೆಸ್ಟೋವಿಚ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಷ್ಯಾದ ಪಡೆಗಳು ನಿಕೋಲೇವ್‌ನ ಉತ್ತರಕ್ಕೆ ದಾಳಿ ಇಡಲು ಪ್ರಯತ್ನಿಸುತ್ತಿವೆ. ಹಾಗೆ ಇದರ ಭಾಗವಾಗಿ ದಕ್ಷಿಣ ಉಕ್ರೇನಿಯನ್ ಪರಮಾಣು ವಿದ್ಯುತ್ ಸ್ಥಾವರವನ್ನು ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿವೆ ಎಂದಿದ್ದಾರೆ.
