ಬೆಳಗಾವಿ: ಬೆಳಗಾವಿಯ ಬಿಡಿಸಿಸಿ ಬ್ಯಾಂಕ್ ಮುರಗೋಡ ಶಾಖೆಯಲ್ಲಿ ಕಳ್ಳರು ಕೈಚಳಕ ತೋರಿದ್ದು, ಬರೋಬ್ಬರಿ 5 ಕೋಟಿಗೂ ಅಧಿಕ ಮೌಲ್ಯದ ಹಣ, ಚಿನ್ನಾಭರಣ ಲೂಟಿ ಮಾಡಿರುವುದು ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುರಗೋಡದ ಬಿಡಿಸಿಸಿ ಬ್ಯಾಂಕ್ ಗೆ ನುಗ್ಗಿರುವ ದರೋಡೆಕೋರರು, ಬ್ಯಾಂಕ್ ಬಾಗಿಲು ಮುರಿದು ನಕಲಿ ಕೀ ಬಳಸಿ ಹಣ, ಚಿಭಾರಣ ದೋಚಿ ಪರಾರಿಯಾಗಿದ್ದಾರೆ.