ಬೆಳಗಾವಿ: ಪೀರನವಾಡಿಯ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ ಇತ್ಯರ್ಥವಾಗಿದೆ. ಆದರೆ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಮಾಡುತ್ತಿರುವ ಪೋಸ್ಟ್ ರಾಯಣ್ಣ, ಶಿವಾಜಿ ಅಭಿಮಾನಿಗಳನ್ನು ಕೆರಳಿಸುವಂತಿವೆ.
ಪೀರನವಾಡಿ ವೃತ್ತದಲ್ಲಿ ಸ್ಥಾಪನೆ ಆಗಿರೋ ರಾಯಣ್ಣ ಪ್ರತಿಮೆ ವಿದಾದ ಸೌಹಾರ್ದತೆಯಿಂದ ಇತ್ಯರ್ಥ ಪಡಿಸಲಾಗಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ರೀತಿಯ ಚರ್ಚೆಗಳು ನಡೆಯುತ್ತಿವೆ.
ಶಿವಾಜಿ ಪರವಾಗಿ ಅನೇಕರು ಪೋಸ್ಟ್ ಗಳನ್ನು ಹಾಕಿದ್ರೆ, ರಾಯಣ್ಣನ ಪರವಾಗಿಯೂ ಅನೇಕರು ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ. ಇದರಿಂದ ಅನಗತ್ಯ ಗೊಂದಲಗಳು ಸೃಷ್ಠಿಯಾಗುತ್ತಿದೆ. ಜತೆಗೆ ಅಭಿಮಾನಿಗಳ ಕೆರಳಿಸುವ ಪ್ರಯತ್ನಗಳು ನಡಿಯುತ್ತಿವೆ.
ಈಗಾಗಲೇ ಪೊಲೀಸರು ಮುನ್ನೆಚ್ಚರಿಕೆಯಾಗಿ ವಿವಾದ ಸ್ಥಳದಲ್ಲಿ ಪೊಲೀಸ್ ರನ್ನು ನಿಯೋಜನೆ ಮಾಡದೆ ಇರುವ ಹಿನ್ನೆಲೆ ದೊಡ್ಡ ಮಟ್ಟದ ಗಲಾಟೆಯಾಗಲು ಕಾರಣವಾಯಿತು. ಆದರೆ ಈಗ ಮತ್ತೆ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗುತ್ತಿದ್ದು, ಇದರಿಂದ ಅನಗತ್ಯ ಗೊಂದಲಗಳು ಸೃಷ್ಠಿಯಾಗುತ್ತಿದೆ.
ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಪೋಸ್ಟ್ ಮಾಡುವವರ ವಿರುದ್ಧ ಹಾಗೂ ಸಾಮಾಜಿಕ ಜಾಲತಾಣದ ಮೇಲೆ ನಿಗಾ ವಹಿಸಬೇಕಾಗಿದೆ.
ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ಕೆ.ತ್ಯಾಗರಾಜನ್ ತಿಳಿಸಿದ್ದಾರೆ.
ಪೀರನವಾಡಿಯಲ್ಲಿ ಎರಡು ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿ ಸಂಧಾನ ಮಾಡಲಾಗಿದೆ. ಆದರೆ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿಅವಹೇಳನಾಕಾರಿ ಪೋಸ್ಟ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ.
ಆದ ಕಾರಣ ಪೋಸ್ಟ್ ಮಾಡುವವರು, ಅಡ್ಮಿನ್, ಕಮೆಂಟ್ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.
ವಲಸಿಗರನ್ನು ಓಡಿಸಿ ಕರ್ನಾಟಕವನ್ನು ಉಳಿಸಿ ಎಂಬ ಫೇಸ್ ಬುಕ್‌ಪೇಜ್ ನಲ್ಲಿ ಶಿವಾಜಿ ಮಹಾರಾಜರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹರಿದಾಡುತ್ತಿರುವುದನ್ನು ಗಮನಿಸಿ ಪೊಲೀಸರು ಖಡಕ್ ಸೂಚನೆ ನೀಡಿದ್ದಾರೆ.