ಬೆಳಗಾವಿ : ಕೊರೊನಾ ಸೋಂಕಿನಿಂದ ಮೃತಪಟ್ಟ ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿ, ಮುಸ್ಲೀಂ ಯುವಕರು ಮಾನವೀಯತೆ ಮೆರೆದಿದ್ದಾರೆ.
ಇಲ್ಲಿನ ಸರಾಫ್ ಗಲ್ಲಿಯಲ್ಲಿನ 70 ವರ್ಷದ ವೃದ್ಧ ನಿನ್ನೆ ಸಾವನ್ನಪ್ಪಿದ್ದರು. ಆದರೆ ಕೊರೊನಾ ಸೋಂಕಿಗೆ ಭಯ ಪಟ್ಟಿರುವ ಜನರು ಅಂತ್ಯಕ್ರಿಯೆಗೆ ಬಾರದೆ ಇರುವ ಹಿನ್ನೆಲೆಯಲ್ಲಿ ಮುಸ್ಲೀಂ ಯುವಕರೇ ಹಿಂದೂ ಧರ್ಮದ ವಿಧಿವಿದಾನಗಳ ಪ್ರಕಾರ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನೆರೆವೇರಿಸಿದ್ದಾರೆ.
ಅಂಜುಮನ್ ಸಂಸ್ಥೆ ಅಧ್ಯಕ್ಷ ರಾಜು ಸೇಠ್ ಅವರು ಯುವಕರ ತಂಡವನ್ನು ರಚಿಸಿದ್ದು, ಆ ತಂಡ ಧರ್ಮ, ಜಾತಿ ಎಂಬುವುದನ್ನು ಬದಿಗಿಟ್ಟು ಕೋವಿಡ್ ಮೃತದೇಹಗಳ ಅಂತ್ಯಕ್ರಿಯೆ ಮಾಡುತ್ತಿದ್ದಾರೆ.
ಈ ಯುವಕ ತಂಡ ಜಿಲ್ಲೆಯ ಹಲವು ಗ್ರಾಮಗಳಿಗೆ ತೆರಳಿ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರೆವೇರಿಸಿದ್ದಾರೆ. ಅದೇ ರೀತಿಯಲ್ಲಿ ಬೆಳಗಾವಿಯಲ್ಲಿ ಹಿಂದೂ ವೃದ್ಧನ ಅಂತ್ಯಕ್ರಿಯೆ ನಡೆಸಿದ್ದಾರೆ