ದಾವಣಗೆರೆ: ಎಟಿಎಂಗಳಿಗೆ ಹಣ ಬಿಡಿಸಲು ಬರುವ ಜನರಿಗೆ ಸಹಾಯ ಮಾಡುವ ನೆಪದಲ್ಲಿ ಅಮಾಯಕರ ಕಾರ್ಡ್ಗಳನ್ನು ಬದಲಾಯಿಸಿ ಮೋಸ ಮಾಡಿ ಹಣ ಲಪಟಾಯಿಸುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಿವಾಸಿ ಯೋಗಾನಂದ (47) ಬಂಧಿತ ಆರೋಪಿ. ಈತ ಪಿಎಚ್ಡಿ ಪದವೀಧರನಾಗಿದ್ದು, ಎಟಿಎಂಗೆ ಗ್ರಾಹಕರಿಗೆ ಮೋಸ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ. ಹಣ ಬಿಡಿಸಲು ಎಟಿಎಂಗೆ ಬರುವ ವೃದ್ಧರನ್ನು ಖದೀಮ ಟಾರ್ಗೆಟ್ ಮಾಡುತ್ತಿದ್ದನು. ಆರೋಪಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.ಆರೋಪಿ ಸುಮಾರು 78 ಅಮಾಯಕರನ್ನು ವಂಚಿಸಿದ್ದು, 18 ಪ್ರಕರಣಗಳಿಗೆ ಸಂಬಂಧಿಸಿದಂತೆ 8.58 ಲಕ್ಷ ನಗದನ್ನು ಪೊಲೀಸರು ಜಪ್ತಿ ಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ಸಿ.ಬಿ.ರಿಷ್ಯಂತ್ ಮಾಹಿತಿ ನೀಡಿದ್ದಾರೆ.
Laxmi News 24×7