ಯುಕ್ರೇನ್ ಮೇಲೆ ರಷ್ಯಾ ಮುಗಿಬಿದ್ದು ಈಗಾಗಲೇ ಒಂದು ವಾರ ಕಳೆದೋಗಿದೆ. ಸಂಘರ್ಷ 8ನೇ ದಿನಕ್ಕೆ ಕಾಲಿಟ್ಟಿದೆ. ಆದ್ರೆ ಇಲ್ಲಿ ರಷ್ಯಾ ಅಂದುಕೊಂಡಿದ್ದರ ಮಟ್ಟಿಗೆ ಯಶಸ್ಸು ಸಿಗ್ತಾ ಇಲ್ಲ. ಯುಕ್ರೇನ್ ಕಡೆಯಿಂದ ಬಲವಾದ ವಿರೋಧ ಎದುರಾಗ್ತಿದೆ.
ಮತ್ತೊಂದ್ಕಡೆ ಪಾಶ್ಚಿಮಾತ್ಯ ದೇಶಗಳು ಯುಕ್ರೇನ್ಗೆ ನಿರಂತರವಾಗಿ ಸಪೋರ್ಟ್ ಮಾಡ್ತಾ ಇದಾರೆ. ಇದ್ರ ನಡುವೆಯೇ ಭಾನುವಾರ ಪುಟಿನ್ ಪರಮಾಣು ಶಸ್ತ್ರಾಸ್ತ್ರಗಳನ್ನು ರೆಡಿ ಇಟ್ಕೊಳ್ಳಿ ಅಂತ ಆದೇಶಿಸಿದ್ರು. ಇದೀಗ ಕಂಟ್ರೋಲ್ಗೆ ಬಾರದ ಯುಕ್ರೇನ್ ಮೇಲೆ ಎಸ್ 400 ಕ್ಷಿಪಣಿ ವ್ಯವಸ್ಥೆಯನ್ನು ಬಳಸೋ ಸುಳಿವು ಕೊಡ್ತಿದೆ ರಷ್ಯಾ.. ಯೆಸ್..ರಷ್ಯಾದ ನಗರಗಳಲ್ಲಿ ಎಸ್-400 ಕ್ಷಿಪಣಿ ವ್ಯವಸ್ಥೆಯ ವಾಹನಗಳು ಓಡಾಡಿರೋ ಬಗ್ಗೆ ವರದಿಯಾಗಿದ್ದು, ಸಮರಾಭ್ಯಾಸ ಕೂಡ ಶುರುವಾಗಿದೆ. ಆದ್ರೆ ಈಗ ಬಂದಿರೋ ಮಾಹಿತಿ ಪ್ರಕಾರ ನೊವೊರ್ಸಿಬಿರ್ಸ್ಕ್ನಲ್ಲಿ ಈ ಸಮರಾಭ್ಯಾಸ ನಡೀತಾ ಇದೆ.
ಇದು ಯುಕ್ರೇನ್ನಿಂದ ತುಂಬಾ ದೂರ ಇದೆ. ರಷ್ಯಾದ ಮಧ್ಯಭಾಗದಲ್ಲಿ ಕಜಕ್ಸ್ಥಾನದ ಗಡಿಭಾಗದಲ್ಲಿ ಈ ಪ್ರದೇಶ ಬರುತ್ತೆ. ಇಲ್ಲಿ ದೊಡ್ಡಮಟ್ಟದಲ್ಲಿ ಸಮರಾಭ್ಯಾಸ ನಡೀತಿರೋ ಮಾಹಿತಿ ಸಿಕ್ಕಿದೆ. ಎಸ್-400 ರಷ್ಯಾದ ಶಕ್ತಿಶಾಲಿ ಕ್ಷಿಪಣಿ ವ್ಯವಸ್ಥೆಯಾಗಿದ್ದು, ಇದು ನೆಲದ ಮೇಲಿಂದ ದೊಡ್ಡಮಟ್ಟದಲ್ಲಿ ದಾಳಿ ನಡೆಸಬಲ್ಲ ಕ್ಷಿಪಣಿ ವ್ಯವಸ್ಥೆಯಾಗಿದೆ. ಇದು ಫೈಟರ್ ಜೆಟ್, ಬಾಂಬರ್ಸ್, ವಿವಿಧ ಕ್ಷಿಪಣಿಗಳು, ಮಾನವ ರಹಿತ ಏರ್ಕ್ರಾಫ್ಟ್ಗಳನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಇದ್ರಲ್ಲಿ 4 ಬಗೆಯ ಮಿಸೈಲ್ಗಳಿವೆ.. ಇವು 400 ಕಿಲೋಮೀಟರ್ವರೆಗೆ ಸಾಗಿ ದಾಳಿ ನಡೆಸೋ ಸಾಮರ್ಥ್ಯ ಹೊಂದಿರುತ್ತವೆ.