ಬೆಂಗಳೂರು: ವ್ಹೀಲಿಂಗ್ ಮಾಡಿ, ವಿಡಿಯೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಾಕುತ್ತಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಹಗಲು, ರಾತ್ರಿ ಎನ್ನದೆ ವ್ಹೀಲಿಂಗ್ ಮಾಡುತ್ತಿದ್ದ ಆರೋಪಿಯನ್ನು ಹೆಬ್ಬಾಳ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮತ್ತಿಕೆರೆ ನಿವಾಸಿ ಶೇಖ್ ಸಮೀರ್ ಬಂಧಿತ ಆರೋಪಿ, ಕೊಡಿಗೇಹಳ್ಳಿ ಜಂಕ್ಷನ್ ಹತ್ತಿರ ವ್ಹೀಲಿಂಗ್ ಮಾಡುತ್ತಿದ್ದಾಗ ಆರೋಪಿಯನ್ನು ಬಂಧಿಸಲಾಗಿದೆ.
ಘಟನೆ ಸಂಬಂಧ ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹೆಬ್ಬಾಳ ಸಂಚಾರಿ ಠಾಣಾ ಇನ್ಸ್‍ಪೆಕ್ಟರ್ ಫೈರೋಜ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ. ವ್ಹೀಲಿಂಗ್ ಮಾಡಿದ ವಿಡಿಯೋಗಳನ್ನು ಆರೋಪಿ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿ ಮೆಚ್ಚುಗೆ ಗಳಿಸುತ್ತಿದ್ದ. ಜೀವದ ಹಂಗು ತೊರೆದು ಕಾನೂನು ನಾಹಿರವಾಗಿ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುತ್ತಿದ್ದ. ಹೀಗಾಗಿ ಈತನ ವಿರುದ್ಧ ದೂರು ದಾಖಲಾಗಿತ್ತು.