ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ ಮಾಫಿಯಾ ನಡೀತಾ ಇದೆ ಅನ್ನೋ ಸುದ್ದಿ ಮಾಧ್ಯಮಗಳ ಮೂಲಕ ನನಗೂ ಗೊತ್ತಾಗಿದೆ. ಫನ್ ಗೋಸ್ಕರ ಚಟದ ಹಿಂದೆ ಬೀಳಬಾರದು. ಫನ್ ಅನ್ನೋದು ವಿಪರೀತ ಆಗಬಾರದು ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹೇಳಿದ್ದಾರೆ.
ನನಗೆ 58 ವರ್ಷ, ಈ ರೀತಿಯ ಎಲ್ಲ ಬೆಳವಣಿಗೆಗಳನ್ನು ನೋಡಿಕೊಂಡು ಬಂದಿದ್ದೇನೆ. ನಾವು ಬೇರೆಯವರಿಗೆ ಮಾದರಿಯಾಗಿ ಇರೋ ರೀತಿ ಜೀವನ ನಡೆಸಬೇಕು. ಈ ಮಾತನ್ನ ನಾನೊಬ್ಬ ಮಗನಾಗಿ, ತಂದೆಯಾಗಿ, ಗಂಡನಾಗಿ ಹೇಳ್ತಿದ್ದೇನೆ. ಪೊಲೀಸರೇ ರೈಡ್ ಮಾಡಿ ಎಲ್ಲವನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ನಾನು ನಟಿಸಿದ ಎಲ್ಲ ಕಲಾವಿದರು ಒಳ್ಳೆಯವರು. ಡ್ರಗ್ಸ್ ಮಾಫಿಯಾ ಅನ್ನೋದು ಚೈನ್. ಒಂದರ ಹಿಂದೆ ಒಂದು ಪ್ರಕರಣಗಳು ಇರುತ್ತೆ. ಈ ಚೈನ್ ಬ್ರೇಕ್ ಮಾಡಬೇಕು ಎಂದರು.
ನಮ್ಮ ಇಂಡಸ್ಟ್ರಿಯಲ್ಲಿ ಡ್ರಗ್ ಮಾಫಿಯಾ ನಾನು ನೋಡಿಲ್ಲ. ಸದ್ಯ ಕೇಳಿ ಬಂದಿರುವ ಆರೋಪಗಳನ್ನು ತಳ್ಳಿ ಹಾಕುವಂತಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದು, ನಾನು ಟಿವಿಗಳಲ್ಲಿ ನೋಡಿದ್ದೇನೆ. ಯಾವುದು ಸರಿ ತಪ್ಪು ಅನ್ನೋದನ್ನು ತೂಗಿ ಅಳೆಯಬೇಕು. ಎಲ್ಲರೂ ತಪ್ಪು ತಿದ್ದಿಕೊಳ್ಳಬೇಕು. ನಾನು ಅಡ್ವೈಸ್ ಮಾಡುವಷ್ಟು ದೊಡ್ಡ ವ್ಯಕ್ತಿಯೂ ಅಲ್ಲ. ಲೀಡರ್ ಅಂದ ತಕ್ಷಣ ಏನೇನೋ ಮಾತಾಡೋಕೆ ಆಗಲ್ಲ ಎಂದು ತಿಳಿಸಿದರು