ಸ್ಮಾಟ್ ಸಿಟಿಯ ಕಾಮಗಾರಿಯು ಕಳಪೆ ಮಟ್ಟದಲ್ಲಿ ನಡೆಯುತ್ತಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಹೇಳಿದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೊಳ ಅವರು ಇಂದು ಗುರುವಾರ ಸ್ಮಾರ್ಟ ಸಿಟಿ ಕಾಮಗಾರಿಯನ್ನು ವೀಕ್ಷಣೆ ಮಾಡಲು ಹೋಗುತ್ತಿದ್ದು ತಾವು ಬರಬಹದು ಎಂದು ಮಾದ್ಯಮ ಪ್ರತಿನಧಿಗಳಿಗೆ ಆಹ್ವಾನಿಸಿದರು
ಸ್ಮಾರ್ಟ ಸಿಟಿ ಕಾಮಗಾರಿಯಲ್ಲಿ ಬಹಳಷ್ಟು ಕಳಪೇ ಮಟ್ಟದ ಕಾಮಗಾರಿ ನಡೆಯುತ್ತಿದ್ದು, ಅಂತಹ ಜಾಗಗಳಿಗೆ ನಿಮ್ಮನ್ನು ಕರೆದುಕೊಂಡು ಹೋಗದೇ ಕೇವಲ ಕಾಮಗಾರಿ ಸರಿಯಾಗಿ ನಡೆಯುತ್ತಿರುವ ಜಾಗಕ್ಕೆ ಅಷ್ಟೇ ನಿಮಗೆ ಕರುಕೊಂಡು ಹೋಗುತ್ತಾರೆ. ಎಂಬ ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಗೋವಿಂದ್ ಕಾರಜೋಳ ಅವರು ಕಾಮಗಾರಿ ಕಳಪೇ ಆಗಬಾರದು ಎಂಬ ಉದ್ದೇಶದಿಂದ ನೋಡಲು ಹೋಗುತ್ತಿರುವುದು, ನಿಮ್ಮ ಗಮನದಲ್ಲಿ ಯಾವುದಾರೂ ಅಂತಹ ಜಾಗಗಳಿದ್ದರೆ ಹೇಳಿ ಅಲ್ಲೇ ಹೋಗೋಣಾ ಎಂದರು.