Breaking News

ಕಚೇರಿ ಬಿಟ್ಟು ಮನೆಯಲ್ಲೇ ಕೆಲಸ: ಲಂಚಕ್ಕೆ ಕೈವೊಡ್ಡಿ ಸ್ಥಳೀಯರ ಮೊಬೈಲ್​ನಲ್ಲಿ ಸಿಕ್ಕಿಬಿದ್ದ ಲಂಚಾವತಾರಿ PDO

Spread the love

ಯಾದಗಿರಿ: ಕರ್ತವ್ಯ ಸಮಯದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟು ಸ್ಥಳದಲ್ಲಿಯೇ ಹಣ ಸ್ವೀಕರಿಸುತ್ತಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸುರಪುರ ತಾಲೂಕಿನ ಅರಕೇರಾ (ಕೆ) ಗ್ರಾಮದ ಪಿಡಿಒ ದುರ್ಗಶ್ರೀ ಲಂಚ ಸ್ವೀಕರಿಸುತ್ತಿರುವ ಕ್ಷಣವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದಿರುವ ಸ್ಥಳೀಯರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

 

ಇ-ಸ್ವತ್ತು ಮಾಡಿ ಕೊಡುವ ವಿಚಾರವಾಗಿ ಪಿಡಿಒಗೆ 5 ಸಾವಿರ ಹಾಗೂ ಕಂಪ್ಯೂಟರ್ ಆಪರೇಟರ್​ಗೆ 2 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಕಚೇರಿಯನ್ನು ಬಿಟ್ಟು ತಮ್ಮ ಮನೆಯಲ್ಲೇ ಲಂಚ ಸ್ವಿಕಾರ ಮಾಡುವಾಗ ಸ್ಥಳೀಯರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಪಂಚಾಯತ್​ನ ಎಲ್ಲ ಫೈಲ್​ಗಳನ್ನು ಮನೆಗೆ ತರಸಿಕೊಂಡು ಫೈಲ್​ಗೆ 5 ಸಾವಿರ ರೂ.ನಂತೆ ಲಂಚ ಸ್ವೀಕರಿಸುತ್ತಿದ್ದ ಆರೋಪ ಪಿಡಿಒ ವಿರುದ್ಧ ಕೇಳಿಬಂದಿದೆ.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ