Breaking News

ರಾಜ್ಯ ಸರ್ಕಾರದಿಂದ ನಿವೃತ್ತ ಸರ್ಕಾರಿ ನೌಕರರಿಗೆ ಬಿಗ್ ಶಾಕ್ : ವಿವಿಧ ಸೌಲಭ್ಯಗಳ ಮೇಲಿನ ‘ಬಡ್ಡಿದರ’ ಭಾರೀ ಇಳಿಕೆ

Spread the love

ಬೆಂಗಳೂರು: ರಾಜ್ಯ ಸರ್ಕಾರದಿಂದ ನಿವೃತ್ತ, ಮರಣೋತ್ತರ ಸರ್ಕಾರಿ ನೌಕರರ ( Karnataka Retired Government Employees ) ತಡವಾಗಿ ಪಾವತಿಯಾದ ಪಿಂಚಣಿ, ಉಪದನ ಹಾಗೂ ಗಳಿಕ ರಜೆ ನಗದೀಕರಣಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಲಾಗಿದೆ.

ಶೇ.8ರಷ್ಟಿದ್ದಂತ ಬಡ್ಡಿದರವನ್ನು ( Interest Rate ) ಪರಿಷ್ಕರಿಸಿ ಶೇ.5.4ಕ್ಕೆ ನಿಗದಿ ಪಡಿಸಲಾಗಿದೆ. ಈ ಮೂಲಕ ನಿವೃತ್ತಿ, ಮರಣೋತ್ತರ ಸೌಲಭ್ಯಗಳ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ( Karnataka Government ) ಬಿಗ್ ಶಾಕ್ ನೀಡಲಾಗಿದೆ.

ಈ ಕುರಿತಂತೆ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಗಳನ್ನು ಹೊರಡಿಸಿದ್ದು, ಸೇವೆಯಿಂದ ನಿವೃತ್ತಿ ಹೊಂದಿದ ನಿವೃತ್ತ ಸರ್ಕಾರಿ ನೌಕರರಿಗೆ ಅಥವಾ ಅವರು ಸೇವೆಯಲ್ಲಿರುವಾಗ ಮರಣ ಹೊಂದಿದ್ದಲ್ಲಿ ಮತ್ತು ನಿವೃತ್ತಿ ನಂತ್ರ ಮರಣ ಹೊಂದಿದ್ದಲ್ಲಿ ಅವರ ಕುಟುಂಬಕ್ಕೆ ಲಭ್ಯವಾಗುವ ನಿವೃತ್ತಿ ವೇತನ, ಮರಣೋತ್ತರ ಸೌಲಭ್ಯಗಳಿಗೆ ವಾರ್ಷಿಕ ಶೇ.12ರ ದರದಲ್ಲಿ ಷರತ್ತು ನಿಬಂಧನೆಗಳೊಂದಿಗೆ ಪಾವತಿಸಲು ಆದೇಶಿಸಲಾಗಿದೆ. ಆನಂತ್ರ ಈ ಬಡ್ಡಿದರವನ್ನು ಪರಿಷ್ಕರಿಸಿ ಶೇ.8ರ ದರದಲ್ಲಿ ಆದೇಶಿಸಲಾಗಿದೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ