ಬೆಂಗಳೂರು: ಸದನದ ಸಮಯ ಹಾಳಾಯ್ತು ಎಂದು ಯಾರೂ ಇಲ್ಲಿಯವರೆಗೂ ನಮ್ಮನ್ನ ಕೇಳಿಲ್ಲ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಮ್ಮ ಹೋರಾಟ ಮುಂದುವರಿಸಿದ್ದೇವೆ. ಬಿಜೆಪಿಯವರಿಗೆ ಕಣ್ಣು ಕಾಣ್ತಿಲ್ಲ, ಕಿವಿಯೂ ಕೇಳ್ತಿಲ್ಲ. ಜನಪರ ಕಾಳಜಿ ಯಾರಿಗೆ ಇದೆ ಎಂದು ಜನರಿಗೆ ಗೊತ್ತಿದೆ ಎಂದರು.
ಕೊರೊನಾ, ಪ್ರವಾಹ ಸಂದರ್ಭದಲ್ಲಿ ಹೇಗೆ ಕೆಲಸ ಮಾಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ರಾಷ್ಟ್ರ ಧ್ವಜದ ಬಗ್ಗೆ ಅಪಮಾನ ಮಾಡಿದವರ ಬಗ್ಗೆ ಪ್ರತಿಭಟನೆ ಮಾಡಬಾರದಾ?. ಇದು ಕಾಂಗ್ರೆಸ್ನ ಹೋರಾಟ ಅಲ್ಲ. ಇದು ದೇಶದ ಹೋರಾಟ. ನಾನೂ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂನಲ್ಲಿ ಆ್ಯಕ್ಟಿವ್ ಆಗಿದ್ದೇನೆ. ನನಗೆ ಆ ರೀತಿಯ ವಿರೋಧ ವ್ಯಕ್ತವಾಗಿಲ್ಲ ಎಂದು ತಿಳಿಸಿದರು.