ಬೆಂಗಳೂರು: ಹೃದಯಾಘಾತದಿಂದ ನಿಧನರಾದ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರ ತಂದೆ ರೇವನಾಥ್ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ.
ರೇವನಾಥ್ (78) ಅವರು ಪುನೀತ್ ಅವರ ನಿಧನ ನಂತರ ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಇಂದು ಹೃದರ್ಯಾಘಾತದಿಂದ ಸಾವನ್ನಪಿದ್ದಾರೆ. ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರೇವಾನಾಥ್ ನಿಧನ ಹಿನ್ನೆಲೆ ಕುಟುಂಬಸ್ಥರು ಅವರ ಕಣ್ಣುಗಳನ್ನು ದಾನ ಮಾಡಿದ್ಧಾರೆ.
ರೇವನಾಥ್ ಕಣ್ಣು ದಾನ ಪಡೆದು ತೆರಳಿದ ರಾಜ್‍ಕುಮಾರ್ ನೇತ್ರದಾನ ಕೇಂದ್ರದ ಸಿಬ್ಬಂದಿ. ನಾರಾಯಣ್ ನೇತ್ರಾಲಯಕ್ಕೆ ಕಣ್ಣುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಅಳಿಯ ಪುನೀತ್ ರಾಜ್‍ಕುಮಾರ್ ಅವರು ಹಾದಿಯಲ್ಲೆ ರೇವನಾಥ್ ಕೂಡ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಎಂಎಸ್ ರಾಮಯ್ಯ ಆಸ್ಪತ್ರೆಗೆ ನಟ ಶ್ರೀ ಮುರುಳಿ, ಶಿವರಾಜ್‌ಕುಮಾರ್ ಹಾಗೂ ಕುಟುಂಬಸ್ಥರು ಬಂದಿದ್ದಾರೆ. ಮೃತದೇಹ ಅಂತಿಮ ದರ್ಶನ ಪಡೆದು ಆಸ್ಪತ್ರೆಯಿಂದ ತೆರಳಿದ್ದಾರೆ.