ಕಲಬುರಗಿ: ರಾಜ್ಯ ಕಂದಾಯ ಸಚಿವರು ಗ್ರಾಮೀಣ ಭಾಗದ ಜನರ ಸಮಸ್ಯೆ ಆಲಿಸಲು ಮತ್ತು ಸಮಸ್ಯೆ ಗೆ ಪರಿಹಾರ ಕಲ್ಪಿಸಲು ಪ್ರತಿ ತಿಂಗಳು ಜಿಲ್ಲಾಧಿಕಾರಿ, ತಹಶಿಲ್ದಾರರು ತಮ್ಮ ವ್ಯಾಪ್ತಿಯ ಒಂದು ಹಳ್ಳಿಗೆ ಭೇಟಿ ನೀಡಿ, ಅಲ್ಲಿಯೇ ಗ್ರಾಮ ವಾಸ್ತವ್ಯ ಮಾಡಲು (jilhadhikari nade halli kade) ಸೂಚನೆ ನೀಡಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಕೆಲ ತಿಂಗಳಿಂದ ಬಂದಾಗಿದ್ದ ಗ್ರಾಮ ವಾಸ್ತವ್ಯ ಇಂದು ಮತ್ತೆ ಪ್ರಾರಂಭವಾಗಿದೆ. ಆದರೆ ಗ್ರಾಮ ವಾಸ್ತ್ಯವ್ಯಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಅಪ್ಪಟ ಹಳ್ಳಿಯ ಜನರಂತೆ ವೇಷ ಭೂಷಣ ತೊಟ್ಟು ರೈತನಂತೆ ಹಳ್ಳಿಗೆ ಎಂಟ್ರಿ ಕೊಟ್ಟಿದ್ದಾರೆ. ಜಿಲ್ಲಾಧಿಕಾರಿ ವೇಷ ಭೂಷಣ ಕಂಡು ಸ್ವತ ಹಳ್ಳಿಯ ಜನರು ಬೆರಗಾಗಿದ್ದಾರೆ.
ಐಎಎಸ್ ಹಮ್ಮುಬಿಮ್ಮು, ಜಿಲ್ಲೆಯ ಪ್ರಥಮ ಅಧಿಕಾರಿ ಎಂಬ ಗೌರವ/ಗರ್ವ ಕಳಚಿಟ್ಟು ರೈತಾಪಿ ಜನರನ್ನು ಕಂಡು ಮಾತನಾಡಿಸಿದ್ದಾರೆ. ಕಳೆದ ತಿಂಗಳಷ್ಟೇ ಜಿಲ್ಲಾಧಿಕಾರಿಯಾಗಿ ಕಲಬುರಗಿ ಜಿಲ್ಲಾ ಕೇಂದ್ರಕ್ಕೆ ಬಂದಿಳಿದ ಬೆಂಗಳೂರು ಮೂಲದ ಯಶವಂತ ವಿ. ಗುರುಕರ್ ಭಾರತೀಯ ನಾಗರಿಕ ಸೇವೆಗೆ ಸೇರುವ ಮುನ್ನ ಟೆಕ್ಕಿಯಾಗಿದ್ದವರು. 2010ನೇ ಸಾಲಿನ IAS batch ಅಧಿಕಾರಿ.
ಹೌದು, ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಗ್ರಾಮವಾಸ್ತವ್ಯ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಕೊಂಚೂರು ಗ್ರಾಮಕ್ಕೆ ಆಗಮಿಸಿದ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರನ್ನು (Kalaburgi Deputy Commissioner) ಗ್ರಾಮಸ್ಥರು ಆತ್ಮೀಯವಾಗಿ ಬರಮಾಡಿಕೊಂಡರು.