ಬಳ್ಳಾರಿ: ಮೊಬೈಲ್(Mobile Phone) ವಿಚಾರಕ್ಕೆ ಮನೆ ಬಿಟ್ಟು ಹೋಗಿದ್ದಾತ ಶವವಾಗಿ(Dead Body) ಪತ್ತೆಯಾದ ಘಟನೆ ವಿಜಯನಗರದಲ್ಲಿ(Vijayanagara) ನಡೆದಿದೆ. ಬಡತನದ(Poverty) ಬೇಗೆಯಲ್ಲಿ ಬೇಯ್ತಿದ್ದ ಪೋಷಕರು ಮೊಬೈಲ್ ಕೊಡಿಸಲಾಗದೆ ಇದ್ದೊಬ್ಬ ಮಗನ ಬೇಡಿಕೆಯನ್ನ ಈಡೇರಿಸಲಾಗದೆ ಈಗ ಕಣ್ಣೀರಲ್ಲಿ ಕೈ ತೊಳಿಯುವಂತಾಗಿದೆ. ಮಗನನ್ನ ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
ವಿಜಯನಗರದ ಕೊಟ್ಟೂರಿನ ಸನ್ನಿಧಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡ್ತಾ ಇದ್ದ ನಾಗರಾಜ್, ಮೊಬೈಲ್ ಕೊಡಿಸುವಂತೆ ಪೋಷಕರ ಬೆನ್ನು ಬಿದ್ದಿದ್ದ. ಮೊಬೈಲ್ ವಿಚಾರಕ್ಕೆ ಹಠ ಹಿಡಿದು ಮನೆಯನ್ನೂ ಬಿಟ್ಟಿದ್ದ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ಪೋಷಕರು, ಮಗನಿಗಾಗಿ ಹುಡುಕಾಟ ನಡೆಸಿದ್ದಾರೆ. ಆ ವೇಳೆ ಸುಟ್ಟು ಕರಕಲಾದ ನಾಗರಾಜ್ನ ಮೃತದೇಹ ಪತ್ತೆಯಾಗಿದ್ದು, ಪೋಷಕರಿಗೆ ದಿಗಿಲು ಬಡಿದಿದೆ.