ಪಾಟ್ನಾ: ಬಿಹಾರದ ಮಧುಬನಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೊಂಡಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಪೂರ್ವ ಕೇಂದ್ರ ರೈಲ್ವೆ (ಇಸಿಆರ್) ತಿಳಿಸಿದೆ.
ಪೂರ್ವ ಕೇಂದ್ರ ರೈಲ್ವೆ ಪ್ರಕಾರ ಇಂದು ಬೆಳಗ್ಗೆ 9.13ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, 9.50ಕ್ಕೆ ಬೆಂಕಿ ನಂದಿಸಲಾಗಿದೆ. ಜಯನಗರದಿಂದ ನವದೆಹಲಿಗೆ ತೆರಳುವ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್‍ನಲ್ಲಿ ಈ ಘಟನೆ ಸಂಭವಿಸಿದೆ.
#WATCH | Fire breaks out in an empty train at Madhubani railway station in Bihar pic.twitter.com/Rps2N8gwKk
— ANI (@ANI) February 19, 2022
ಈ ಮುನ್ನ ಐದು ಬೋಗಿಗಳಿಗೆ ಬೆಂಕಿ ತಗುಲಿದೆ ಎಂದು ವರದಿಯಾಗಿತ್ತು. ಆದರೆ ರೈಲಿನ ಒಂದು ಬೋಗಿಗೆ ಮಾತ್ರ ಬೆಂಕಿ ಹೊತ್ತಿಕೊಂಡಿದೆ ಮತ್ತು ಈ ಘಟನೆಯಲ್ಲಿ ಯಾವುದೇ ವ್ಯಕ್ತಿಗೆ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ ಎಂದು ಇಸಿಆರ್ ಮಾಹಿತಿ ನೀಡಿದೆ.