Breaking News

ಲತಾ ಮಂಗೇಶ್ಕರ್ ನಿಧನ: ಬಸವರಾಜ ಬೊಮ್ಮಾಯಿ ಸೇರಿದಂತೆ ನಾಡಿನ ಗಣ್ಯರಿಂದ ಸಂತಾಪ

Spread the love

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಗಾಯಕಿ ಲತಾ ಮಂಗೇಶ್ಕರ್ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ಸೂಚಿಸಿದ್ದಾರೆ.

ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ತಾನೇ ಲತಾ ಮಂಗೇಶ್ಕರ್ ನಮ್ಮನ್ನಗಲಿದ್ದಾರೆ ಎಂಬ ಸುದ್ದಿ ಬಂದಿದೆ. ಭಾರತದ ಸಾರಸ್ವತ ಲೋಕದಲ್ಲಿ ಅವರು ಮಿನುಗುವ ತಾರೆ, ಅವರ ಹಾಡುಗಳು ಕೇವಲ ಸಿನಿಮಾಕ್ಕೆ ಸೀಮಿತವಾಗಿರಲಿಲ್ಲ, ಭಜನೆಗಳು, ದೇಶಭಕ್ತಿ ಗೀತೆಗಳು, ದೇವರ ಗೀತೆಗಳನ್ನು ಹಾಡಿದ್ದಾರೆ. ಯೇ ಮೇರೆ ವತನ್ ಕಿ ಲೋಗೋ ಹಾಡು ಇವತ್ತಿಗೂ ಕೇಳಿದ್ರೆ ದೇಶಭಕ್ತಿ ಉಕ್ಕಿಹರಿಯುತ್ತೆ, ಈ‌ ಹಾಡು ಹಿಮಾಲಯದಷ್ಟೇ ಚಿರಸ್ಥಾಯಿ. ಲತಾ ಮಂಗೇಶ್ಕರ್ ಕನ್ನಡದಲ್ಲೂ ಹಾಡಿದ್ದಾರೆ, ಅವರಿಗೆ ಕನ್ನಡದ ನಂಟೂ ಇತ್ತು. ನಮ್ಮೆಲ್ಲರಿಗೂ ಅಪಾರ ದುಃಖವಾಗಿದೆ. ಭಾರತದ ಕೋಗಿಲೆ ಹಾಡೋದನ್ನು ನಿಲ್ಲಿಸಿದೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರು ಸಾರಸ್ವತ ಲೋಕದಲ್ಲಿ ಸದಾ‌ ಮಿನುಗುತ್ತಿರುತ್ತಾರೆ ಎಂದು ಹೇಳಿದರು.

 

ನಾಳೆ ಬೆಳಗ್ಗೆ ದೆಹಲಿಗೆ ಹೋಗುತ್ತಿದ್ದೇನೆ. ಸಂಸದರ ಜತೆ ಸಭೆ ನಡೆಸುತ್ತೇನೆ, ಕೇಂದ್ರದ ಸಚಿವರ ಜತೆ ಜಲ ಯೋಜನೆಗಳ ಬಗ್ಗೆ ಚರ್ಚೆ ನಡೆಸ್ತೇನೆ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಭೇಟಿಗೆ ಸಮಯ ಕೇಳಿದ್ದೇನೆ ಹಾಗೆ ಬಜೆಟ್, ಹಣಕಾಸು, ಜಿಎಸ್ಟಿ ಬಗ್ಗೆ ಚರ್ಚೆ ನಡೆಸುತ್ತೇನೆ ಮತ್ತು ಪಕ್ಷದ ವರಿಷ್ಠರ ಸಮಯವನ್ನೂ ಕೇಳಿದ್ದೇನೆ. ವರಿಷ್ಠರು ಸಂಸತ್ ಅಧಿವೇಶನ ಹಾಗೂ ಯುಪಿ ಚುನಾವಣೆಯಲ್ಲಿ ಬ್ಯುಸಿ ಇದ್ದಾರೆ. ಇವತ್ತು ಸಂಜೆ ಯಾರೆಲ್ಲರ ಭೇಟಿಗೆ ಸಮಯ ಸಿಗುತ್ತೆ ಅಂತ ಗೊತ್ತಾಗುತ್ತದೆ ಎಂದು ಮಾಹಿತಿ ನೀಡಿದರು.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ