ಬೆಂಗಳೂರು: ಸಿಸಿಟಿವಿಗೆ ಚೂಯಿಂಗ್ ಗಮ್ ಅಂಟಿಸಿ ಎಟಿಎಂ ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಸಮರ ಜ್ಯೋತ್ ಸಿಂಗ್, ಜಾಫರ್ ಸಾಧಿಕ್, ಯಹ್‍ಯಾ ಬಂಧಿತ ಆರೋಪಿಗಳಾಗಿದ್ದು, ಜಾಲಹಳ್ಳಿ ಕೆನರಾ ಬ್ಯಾಂಕ್ ಎಟಿಎಂ ನಿಂದ 27 ಲಕ್ಷ ಹಣ ದರೋಡೆ ಮಾಡಿದ್ದರು.
ಆಗಸ್ಟ್ 10ರ ರಾತ್ರಿ ಎಟಿಎಂ ಕೇಂದ್ರ ಒಳಗಿದ್ದ ಮೂವರು ಆರೋಪಿಗಳು ಮೊದಲು ಸಿಸಿಟಿವಿ ಕ್ಯಾಮೆರಾಗೆ ಚೂಯಿಂಗ್ ಗಮ್ ಅಂಟಿಸಿ ಬಳಿಕ ವೈಯರ್ ಕಟ್ ಮಾಡಿ ಕೃತ್ಯ ಎಸಗಿದ್ದರು. ಅಲ್ಲದೇ ಕೃತ್ಯಕ್ಕೆ 100 ಕೆಜಿ ಗ್ಯಾಸ್ ಕಟರ್ ಹಾಗೂ ಸ್ಕ್ರೂ ಡ್ರೈವರ್, ಫೆನ್ಸಿಂಗ್ ಕಟ್ ಮಾಡುವ ಕಟರ್ ಬಳಸಿದ್ದರು.

ಸದ್ಯ ಬಂಧನವಾಗಿರುವ ಪ್ರಮುಖ ಆರೋಪಿ ಸಮೋರ ಜ್ಯೋತ್ ಸಿಂಗ್ ಮೂಲತಃ ಹರಿಯಾಣದ ಮೂಲದವನಾಗಿದ್ದು, ಜನವರಿಯಲ್ಲಿ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಸ್‍ಬಿಐ ಬ್ಯಾಂಕ್ ಎಟಿಎಂ ದರೋಡೆಗೆ ಯತ್ನಿಸಿ ಜೈಲು ಸೇರಿದ್ದ. ಇತರ ಬಂಧಿತ ಆರೋಪಿಗಳಾದ ಕೇರಳ ಮೂಲದ ಜಾಫರ್ ಸಾಧಿಕ್, ಯಹ್‍ಯಾ ಗಾಂಜಾ ಕೇಸ್‍ನಲ್ಲಿ ಸದಾಶಿವನಗರ ಪೊಲೀಸರಿಗೆ ಸಿಕ್ಕಿ ಬಿದ್ದು ಜೈಲು ಸೇರಿದ್ದರು. ಪರಪ್ಪನ ಅಗ್ರಹಾರದಲ್ಲಿ ಭೇಟಿಯಾಗಿದ್ದ ಆರೋಪಿಗಳು ಎಟಿಎಂ ದರೋಡೆಗೆ ಸ್ಕೇಚ್ ಜಾಲಹಳ್ಳಿಯ ಎಟಿಎಂಗೆ ದರೋಡೆ ಮಾಡಿದ್ದರು.
Laxmi News 24×7