ಬೆಂಗಳೂರು: ಸತತ ಸೋಲಿನಿಂದ ಕಂಗೆಟ್ಟಿದ್ದ ದಬಾಂಗ್ ದಿಲ್ಲಿ ಶನಿವಾರ ಗೆಲುವಿನ ಲಯಕ್ಕೆ ಮರಳಿದೆ. ಗುಜರಾತ್ ಜೈಂಟ್ಸ್‌ಗೆ 41-22 ಅಂತರದ ಸೋಲುಣಿಸಿ ಮತ್ತೆ ಅಗ್ರಸ್ಥಾನ ಅಲಂಕರಿಸಿದೆ (48 ಅಂಕ). ಬೆಂಗಳೂರು ಬುಲ್ಸ್ ದ್ವಿತೀಯ ಸ್ಥಾನಕ್ಕೆ ಇಳಿಯಿತು (46 ಅಂಕ).
ಇದು 14 ಪಂದ್ಯಗಳಲ್ಲಿ ದಿಲ್ಲಿ ಸಾಧಿಸಿದ 8ನೇ ಗೆಲುವು. ನಾಯಕ ನವೀನ್ ಕುಮಾರ್ ಗೈರಲ್ಲೂ ಗೆದ್ದು ಬಂದದ್ದು ತಂಡದ ಆತ್ಮವಿಶ್ವಾಸವನ್ನು ಸಹಜವಾಗಿಯೇ ಹೆಚ್ಚಿಸಿದೆ. ಈ ಪಂದ್ಯದಲ್ಲಿ ಜೋಗಿಂದರ್ ನರ್ವಾಲ್ ದಿಲ್ಲಿ ತಂಡವನ್ನು ಮುನ್ನಡೆಸಿದ್ದರು.
ವಿರಾಮದ ವೇಳೆ ದಿಲ್ಲಿ ಗುಜರಾತ್‌ಗಿಂತ ಎರಡರಷ್ಟು ಅಂಕಗಳ ಮುನ್ನಡೆಯಲ್ಲಿತ್ತು (22-11). ದ್ವಿತೀಯಾರ್ಧದಲ್ಲಿ ಇನ್ನಷ್ಟು ಬಿರುಸಿನ ಪ್ರದರ್ಶನ ನೀಡಿತು.
ದಬಾಂಗ್ ದಿಲ್ಲಿ ಸಾಂ ಕ ಆಟದ ಮೂಲಕ ಗಮನ ಸೆಳೆಯಿತು. ಆಲ್‌ರೌಂಡರ್ ವಿಜಯ್ ಸರ್ವಾಧಿಕ 8 ಅಂಕ, ರೈಡರ್ ಆಂಶು ಮಲಿಕ್ ಮತ್ತು ಆಲ್‌ರೌಂಡರ್ ಸಂದೀಪ್ ನರ್ವಾಲ್ ತಲಾ 6 ಅಂಕ, ಡಿಫೆಂಡರ್ ಕೃಶನ್ ಹಾಗೂ ಮತ್ತೋರ್ವ ಸವ್ಯಸಾಚಿ ಮಂಜೀತ್ ಚಿಲ್ಲಾರ್ ತಲಾ 5 ಅಂಕ ತಂದಿತ್ತರು.
ಇದು ಗುಜರಾತ್‌ಗೆ 12 ಪಂದ್ಯಗಳಲ್ಲಿ ಎದುರಾದ 6ನೇ ಸೋಲು. ರೈಡರ್ ಪ್ರದೀಪ್ ನರ್ವಾಲ್ ಅವರಿಂದಷ್ಟೇ ಗಮನಾರ್ಹ ಆಟ ಕಂಡುಬಂತು (7 ಅಂಕ).
Laxmi News 24×7