ನಟರಾಜ್, ಬಾಲಾಜಿ, ವೆಂಕಟೇಶ, ರಾಕೇಶ್ ಬಂಧಿತ ಆರೋಪಿಗಳು. ನಕಲಿ ನೋಟಿನ ಕಂತೆ ಮೊಬೈಲ್‌ನಲ್ಲಿ(Mobile) ವಿಡಿಯೋ ಮಾಡಿ ಹೂಡಿಕೆದಾರರಿಗೆ ತೋರಿಸಿ ಆಫರ್ ನೀಡುತ್ತಿದ್ದ ಆರೋಪಿಗಳು, ಕೆಲವೇ ದಿನಗಳಲ್ಲಿ ಹಣ(Money) ಡಬಲ್ ಮಾಡಿಕೊಡುವುದಾಗಿ ಹೇಳುತ್ತಿದ್ದರು. ಇದನ್ನು ನಂಬಿ ಹೂಡಿಕೆದಾರರು ಹಣ ಕೊಡಲು ಹೋದಾಗ ಕಸಿದು ಪರಾರಿಯಾಗುತ್ತಿದ್ದರು. ಸದ್ಯ ಆರೋಪಿಗಳಿಂದ 20 ಕೋಟಿ ಮೊತ್ತದ ನಕಲಿ ನೋಟು, 2 ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಕಿಡ್ನಾಪ್ ಕೇಸ್ ದಾಖಲಾಗಿತ್ತು. ಸೈಟ್ ತೋರಿಸ್ತೀನಿ ಅಂತ ಕಿಡ್ನಾಪ್ ಮಾಡಿ ಹೆದರಿಸಿ 10 ಲಕ್ಷ ತಗೊಂಡು ಹೋಗಿದ್ದರು. ನಟರಾಜ್ ಎಂಬಾತ ಗುಂಪು ಕಟ್ಟಿಕೊಂಡು ಕೃತ್ಯ ಮಾಡಿದ್ದ. ಆರೋಪಿಗಳು ಸಿಕ್ಕ ಬಳಿಕ ನಕಲಿ ನೋಟು ಜಾಲ ಪತ್ತೆ ಆಗಿದೆ. ಬ್ಯಾಗ್ ಮೇಲ್ಬಾದಲ್ಲಿ ಒರಿಜಿನಲ್ ನೋಟು ಇಡುತ್ತಿದ್ದರು. ಕೆಳಗಡೆ ನಕಲಿ ನೋಟು ಇಟ್ಟು ಕೋಟ್ಯಾಂತರ ರೂಪಾಯಿ ಹಣ ಇದೆ ಅಂತ ನಂಬಿಸುತ್ತಿದ್ದರು. ಒಂದು ಲಕ್ಷ ಕೊಟ್ಟರೇ ಒಂದು ವಾರದಲ್ಲಿ ಎರಡು ಲಕ್ಷ ಕೊಡ್ತೀವಿ ಅಂತ ಹಣ ಪಡೀತಾ ಇದ್ರು. ಸಾಕಷ್ಟು ಬಿಸಿನೆಸ್ ಇದೆ ಹಣ ಹೂಡಿಕೆ ಮಾಡಿ ಅಂತ ಹಣ ಪಡೀತಾ ಇದ್ರು ಎಂದು ಡಿಸಿಪಿ ಅನೂಪ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.
ಇದರ ಜೊತೆಗೆ ಒಂದು ಲಕ್ಷ ಹಣ ಕೊಟ್ಟರೇ 3ರಿಂದ 5 ಲಕ್ಷ ನಕಲಿ ನೋಟು ಸಹ ನೀಡುತ್ತಿದ್ದರು. ಮೂವಿ ಶೂಟಿಂಗ್ಗೆ ಬಳಸೋ ನೋಟುಗಳು ಸಿಕ್ಕಿದೆ. ತನಿಖೆ ಮುಂದುವರೆದಿದೆ. ಕೆಲವರಿಗೆ ಕೋಟಾ ನೋಟು ಕೊಡೊದಾಗಿ ಸಹ ಹೇಳಿ ವಂಚನೆ ಮಾಡಿರುವ ಅನುಮಾನ ಇದೆ. ಈ ಬಗ್ಗೆ ಸಹ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.