Breaking News

ರವಿ ಚೆನ್ನಣ್ಣನವರ್ ವರ್ಗಾವಣೆ; ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ನೇಮಕ

Spread the love

ಬೆಂಗಳೂರು: ಇತ್ತೀಚೆಗೆ ಸಾಕಷ್ಟು ಆರೋಪ ಹಾಗೂ ವಿವಾದಗಳಿಗೆ ಈಡಾಗಿದ್ದ ಹಿರಿಯ ಐಪಿಎಸ್​ ಅಧಿಕಾರಿ ರವಿ ಚನ್ನಣ್ಣನವರ್​ಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಎಕ್ಸಿಕ್ಯೂಟಿವ್​​ ಸ್ಥಾನದಿಂದ ನಾನ್​​-ಎಕ್ಸಿಕ್ಯೂಟಿವ್ ಸ್ಥಾನಕ್ಕೆ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ನೀಡಿದೆ.

ಸಿಐಡಿಯಲ್ಲಿ ಅಧಿಕಾರಿಯಾಗಿದ್ದ ರವಿ ಚನ್ನಣ್ಣನವರ್​​ ಅವರನ್ನ ಸರ್ಕಾರ ನಿಗಮ ಮಂಡಳಿಗೆ ವರ್ಗಾವಣೆ ಮಾಡಿರೋದು ಸದ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಕೇವಲ ರವಿ ಚನ್ನಣ್ಣನವರ್ ಮಾತ್ರವಲ್ಲ, ಒಟ್ಟು ಒಂಬತ್ತು ಐಪಿಎಸ್​ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ನೀಡಿದೆ. ಐಪಿಎಸ್​ ರವಿ. ಡಿ. ಚೆನ್ನಣ್ಣನವರ್ ಅವರನ್ನು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ನೇಮಿಸಲಾಗಿದೆ. ಇನ್ನುಳಿದ ಐಪಿಎಸ್​ ಅಧಿಕಾರಿಗಳಾದ ಭೀಮಾಶಂಕರ್​ ಗುಳೇದ್​, ಅಬ್ದುಲ್​ ಅಹ್ಮದ್​, ಟಿ.ಶ್ರೀಧರ್​, ಟಿ.ಪಿ.ಶಿವಕುಮಾರ್​, ದಿವ್ಯಾಸಾರಾ ಥಾಮಸ್​, ಡಿ. ಕಿಶೋರ್​ ಬಾಬು, ಎ. ಗಿರಿ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಯಾವ ಅಧಿಕಾರಿ ಎಲ್ಲಿಗೆ ವರ್ಗ?

  1. ರವಿ ಚನ್ನಣ್ಣನವರ್, ಸಿಐಡಿಯಿಂದ ವಾಲ್ಮಿಕಿ ಅಭಿವೃದ್ಧಿ ನಿಗಮ
  2. ಅಬ್ದುಲ್ ಅಹಾದ್ ಎಸಿಬಿ ಯಿಂದ ಕೆಎಸ್​ಆರ್​ಟಿಸಿ ವಿಜಿಲೆನ್ಸ್
  3. ಟಿ. ಶ್ರೀಧರ ಕೊಪ್ಪಳ ಎಸ್.ಪಿ ಯಿಂದ ಡಿಸಿಆರ್​ಇ
  4. ದಿವ್ಯಸಾರ ಥಾಮಸ್, ಚಾಮರಾಜನಗರ ಎಸ್.ಪಿ ಯಿಂದ ಪೊಲೀಸ್ ಅಕಾಡೆಮಿಯ ಮೈಸೂರು ಡೆಪ್ಯೂಟಿ ಡೈರೆಕ್ಟರ್
  5. ಕಿಶೋರ್ ಬಾಬು, ಬೀದರ್ ಎಸ್​ಪಿ ಯಾಗಿ ವರ್ಗಾವಣೆ
  6. ಅರುಣಗಂಶು ಗಿರಿ, ಎಸಿಬಿ ಯಿಂದ ಕೊಪ್ಪಳ ಎಸ್​ಪಿಯಾಗಿ ವರ್ಗಾವಣೆ
  7. ಎಲ್.ನಾಗೇಶ್, ಬೀದರ್ ಎಸ್.ಪಿ ಯಿಂದ ಸಿಐಡಿ ಗೆ ವರ್ಗಾವಣೆ
  8. ಟಿ.ಪಿ ಶಿವಕುಮಾರ್, ಚಾಮರಾಜನಗರ ಎಸ್​ಪಿಯಾಗಿ ನೇಮಕ

ವರ್ಗಾವಣೆ ಪತ್ರ ಇಲ್ಲಿದೆ:


Spread the love

About Laxminews 24x7

Check Also

ರಾಹುಲ್‌ ಜಾರಕಿಹೊಳಿ DCC ಬ್ಯಾಂಕ್ ನಿರ್ದೇಶಕರು ಹಾಗೂ ಯುವ್ತ ಕಾಂಗ್ರೆಸ್ ರಾಜ್ಯ ಪ್ರದಾನ ಕಾರ್ಯದರ್ಶಿಗಳು

Spread the love ರಾಹುಲ್‌ ಜಾರಕಿಹೊಳಿ DCC ಬ್ಯಾಂಕ್ ನಿರ್ದೇಶಕರು ಹಾಗೂ ಯುವ್ತ ಕಾಂಗ್ರೆಸ್ ರಾಜ್ಯ ಪ್ರದಾನ ಕಾರ್ಯದರ್ಶಿಗಳು ಕರ್ನಾಟಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ