Breaking News

ಸಂಕೇಶ್ವರ ಮಹಿಳೆ ಶೂಟೌಟ್ ಕೇಸ್: ಪುರಸಭೆ ಬಿಜೆಪಿ ಸದಸ್ಯನ ಬಂಧನ

Spread the love

ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದ ಮಹಿಳೆಯ ಶೂಟೌಟ್ ಕೇಸ್‍ನಲ್ಲಿ ಪುರಸಭೆ ಸದಸ್ಯನೊರ್ವನಿಗೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಹೌದು ಸಂಕೇಶ್ವರ ಪುರಸಭೆ ಬಿಜೆಪಿ ಸದಸ್ಯ ಉಮೇಶ ಕಾಂಬಳೆ ಬಂಧಿತ ಆರೋಪಿಯಾಗಿದ್ದು. ಜ.16ರಂದು ನಾಡ ಪಿಸ್ತೂಲ್‍ನಿಂದ ಶೈಲಾ ನಿರಂಜನ್ ಸುಭೇದಾರ್(56) ಎಂಬ ಮಹಿಳೆಯ ಎದೆಗೆ ಹಾಗೂ ಕೈಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದ ಸಂಕೇಶ್ವರ ಪಿಎಸ್‍ಐ ಗಣಪತಿ ಕೊಗನೊಳ್ಳಿ ಹಾಗೂ ಸಿಪಿಐ ರಮೇಶ್ ಛಾಯಾಗೋಳ, ಹವಾಲ್ದಾರ್ ಭೀಮಪ್ಪ ನಾಗನೂರೆ, ಬಸವರಾಜ ಕಪರಟ್ಟಿ ಅವರ ತಂಡ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಯನ್ನು ಖೆಡ್ಡಾಗೆ ಕೆಡುವವಲ್ಲಿ ಯಶಸ್ವಿಯಾಗಿದ್ದಾರೆ.

ಬಡ್ಡಿ ವ್ಯವಹಾರ ಮಾಡುತ್ತಿದ್ದ ಶೈಲಾಳಿಂದ 25 ಲಕ್ಷ ರೂ. ಹಣವನ್ನು ಉಮೇಶ ಕಾಂಬಳೆ ಪಡೆದಿದ್ದ. ಬಡ್ಡಿ ಸಮೇತ ಹಣ ಹಿಂದುರಿಗಿಸಲು ಮಹಿಳೆ ಪೀಡಿಸುತ್ತಿದ್ದ ಕಾರಣ ಮಹಾರಾಷ್ಟ್ರದ ಸಾಂಗ್ಲಿಯಿಂದ ಪಿಸ್ತೂಲ್ ತಂದು ಕೊಲೆ ಮಾಡಿದ್ದಾನೆ ಎಂಬ ವಿಚಾರ ತನಿಖೆ ವೇಳೆ ಬಹಿರಂಗವಾಗಿದೆ. ಇನ್ನು ಹೆಚ್ಚಿನ ತನಿಖೆಯನ್ನು ಸಂಕೇಶ್ವರ ಪೊಲೀಸರು ಮುಂದುವರಿಸಿದ್ದಾರೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ