Breaking News

ಗಂಡನ ಡಾಬಾಗೆ ಬೆಂಕಿ ಹಚ್ಚಲು ರೌಡಿಗೆ ಸುಪಾರಿ ನೀಡಿದ್ದ ಪತ್ನಿ

Spread the love

ಬೆಂಗಳೂರು : ಪಾಲುದಾರಿಕೆಯಲ್ಲಿ ಪತಿ ನಡೆಸುತ್ತಿದ್ದ ಡಾಬಾಗೆ ಬೆಂಕಿ ಹಚ್ಚಲು ರೌಡಿಗೆ ಸುಪಾರಿ ನೀಡಿದ್ದ ಪತ್ನಿಯನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿದ್ದ ಯೂ ಟರ್ನ್ ಡಾಬಾ ಮಾಲೀಕ ಅರ್ಪಿತ್ ಪತ್ನಿ ಶೀತಲ್ ಎಂಬಾಕೆಯನ್ನು ಬಂಧಿಸಿ ಹೆಚ್ಚಿನ ವಿಚಾರಣಗೊಳಪಡಿಸಿದ್ದಾರೆ.

ಕಳೆದ‌ ತಿಂಗಳು 24ರಂದು ರಾತ್ರಿ ದುಷ್ಕರ್ಮಿಗಳು ಬಂದು ಡಾಬಾ‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು‌. ಇದನ್ನ ಪ್ರಶ್ನಿಸಲು ಹೋದ ಡಾಬಾದ ಸಿಬ್ಬಂದಿ ಮನೋಜ್ ಎಂಬಾತನ ಮೇಲೂ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದರು.

ಚಿಕಿತ್ಸೆ ಫಲಕಾರಿಯಾಗದೆ ಮನೋಜ್ ಮೃತಪಟ್ಟಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೋಲದೇವನಹಳ್ಳಿ ಪೊಲೀಸರು ಮೂವರು ಆರೋಪಿಗಳಾದ ರೌಡಿಶೀಟರ್ ಮನುಕುಮಾರ್ ಮತ್ತು ಆತನ ಸಹಚರರಾದ ಹೇಮಂತ್ ಹಾಗೂ ಮಂಜುನಾಥನನ್ನ ಬಂಧಿಸಿದ್ದರು‌.

ಕೆಲ ತಿಂಗಳ ಹಿಂದೆ ಅರ್ಪಿತ್ ಹಾಗೂ ಶೀತಲ್ ಮದುವೆಯಾಗಿತ್ತು.‌ ಪ್ರಾರಂಭದಲ್ಲಿ ಅನೋನ್ಯವಾಗಿದ್ದ ದಂಪತಿ ಕಾಲಕ್ರಮೇಣ ಕೌಟುಂಬಿಕ ಕಾರಣಕ್ಕಾಗಿ ಇಬ್ಬರ ನಡುವೆ ವೈಮನಸ್ಸು ಬೆಳೆದಿತ್ತು. ‌ನಿತ್ಯ ಜಗಳವಾಗುತಿತ್ತು‌. ಈ ಹಿನ್ನೆಲೆ ಹೆಂಡತಿಯನ್ನು ತವರು ಮನೆಗೆ ಬಿಟ್ಟು ಬಂದಿದ್ದ. ಹಲವು ದಿನಗಳಾದರೂ ಹೆಂಡ್ತಿ ನೋಡಲು ಹೋಗದೆ ಡಾಬಾ ವ್ಯವಹಾರದಲ್ಲಿ‌ ಮಗ್ನನಾಗಿದ್ದ.‌

ಇದರಿಂದ ಅಸಮಾಧಾನಗೊಂಡು ಗಂಡನಿಗೆ ಬುದ್ಧಿ ಕಲಿಸಲು ಹೋದ ಹೆಂಡತಿ ಶೀತಲ್, ತನ್ನ ಸ್ನೇಹಿತ ರೌಡಿಶೀಟರ್ ಮನುಕುಮಾರ್​ಗೆ ₹20 ಸಾವಿರಕ್ಕೆ ಸುಪಾರಿ ನೀಡಿದ್ದಳು. ಡಾಬಾಗೆ ಬೆಂಕಿ ಹಚ್ಚಿದರೆ ಅರ್ಪಿತ್​​ಗೆ ಬುದ್ಧಿ ಬರುತ್ತದೆ ಎಂಬ ಪ್ಲಾನ್ ಮಾಡಿದ್ದಳು 


Spread the love

About Laxminews 24x7

Check Also

ಕೇರಳ ಸಿಎಂ ಪುತ್ರಿಯ ಕಂಪನಿ ವಿರುದ್ಧ ತನಿಖೆಗೆ ಆದೇಶ ಪ್ರಶ್ನಿಸಿ ಮೇಲ್ಮನವಿ: ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್‌

Spread the love ಬೆಂಗಳೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪುತ್ರಿ ಟಿ.ವೀಣಾ ಅವರು ನಿರ್ದೇಶಕಿಯಾಗಿರುವ ಎಕ್ಸಲಾಜಿಕ್‌ ಸಲ್ಯೂಷನ್‌ ಪ್ರೈವೇಟ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ