ಪಣಜಿ,ಜ.14- ಪ್ರಸ್ತುತ ಗೋವಾದಲ್ಲಿ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮುಂದಿನ ತಿಂಗಳು ವಿಧಾನಸಭಾ ಚುನಾವಣೆಗಳು ನಡೆಯಲಿರುವ ರಾಜ್ಯದಲ್ಲಿ 40 ವಿಧಾನಸಭಾ ಕ್ಷೇತ್ರಗಳ ಪೈಕಿ 38ರಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಪಕ್ಷದ ಹಿರಿಯ ಕಾರ್ಯಕರ್ತರೊಬ್ಬರು ಇಂದು ತಿಳಿಸಿದ್ದಾರೆ.ಬೆನೌಲಿಮ್ ಮತ್ತು ನುವೆಮ್ ಈ ಕ್ಷೇತ್ರಗಳಲ್ಲಿ ಪಕ್ಷವು ತನ್ನ ಚಿಹ್ನೆಯಡಿ ಯಾವುದೇ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸುತ್ತಿಲ್ಲ ಎಂದು ಅವರು ಸುದ್ದಿ ಸಂಸ್ಥೆಗೆ ಹೇಳಿದ್ದಾರೆ. ಸಾಂಪ್ರದಾಯಿಕವಾಗಿ ಬೆನೌಲಿಮ್ ಮತ್ತು ನುವೆಮ್ ಕ್ಷೇತ್ರಗಳ ಮತದಾರರು ಬಿಜೆಪಿಯೇತರ ಅಭ್ಯರ್ಥಿಗಳಿಗೆ ಮತ ಹಾಕುವುದು ವಾಡಿಕೆ. ಇವೆರಡೂ ಕ್ರೈಸ್ತ ಬಾಹುಳ್ಯದ ಕ್ಷೇತ್ರಗಳಾಗಿದ್ದು, ಪ್ರಸ್ತುತ ಬೆನೌಲಿಮ್‍ಅನ್ನು ಚರ್ಚಿಲ್ ಅಲೆಮೋ ಮತ್ತು ವಿಲ್‍ಫ್ರೆಡ್ ಡೀಸಾ ಅವರು ಪ್ರತಿನಿಸುತ್ತಿದ್ದಾರೆ.
Laxmi News 24×7