Breaking News

ಬ್ಯಾಂಕ್ ಆಫ್​ ಬರೋಡಾದಲ್ಲಿ 198 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರಿಗೆ ಅವಕಾಶ

Spread the love

Bank of Baroda Recruitment 2022: ಬ್ಯಾಂಕ್ ಆಫ್​ ಬರೋಡ(Bank of Baroda) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 198 ಮ್ಯಾನೇಜರ್, ಜನರಲ್ ಮ್ಯಾನೇಜರ್, ವೈಸ್ ಪ್ರೆಸಿಡೆಂಟ್, ಪ್ರೊಡಕ್ಟ್ ಮ್ಯಾನೇಜರ್, ಹೆಡ್ ಪ್ರಾಜೆಕ್ಟ್​ & ಪ್ರೊಸೆಸ್, ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್, MIS ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತರು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 12ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಫೆಬ್ರವರಿ 1 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್​ ಆಫ್​ ಬರೋಡ(Bank of Baroda)ದ ಅಧಿಕೃತ ವೆಬ್​ಸೈಟ್​​ www.bankofbaroda.in ಗೆ ಭೇಟಿ ನೀಡಬಹುದಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆ ಬ್ಯಾಂಕ್ ಆಫ್​ ಬರೋಡಾ
ಹುದ್ದೆಯ ಹೆಸರು ಮ್ಯಾನೇಜರ್, ಜನರಲ್ ಮ್ಯಾನೇಜರ್, ವೈಸ್ ಪ್ರೆಸಿಡೆಂಟ್, ಪ್ರೊಡಕ್ಟ್ ಮ್ಯಾನೇಜರ್, ಹೆಡ್ ಪ್ರಾಜೆಕ್ಟ್​ & ಪ್ರೊಸೆಸ್, ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್, MIS ಮ್ಯಾನೇಜರ್​
ಒಟ್ಟು ಹುದ್ದೆಗಳು 198
ವಿದ್ಯಾರ್ಹತೆ ಪದವಿ
ಉದ್ಯೋಗದ ಸ್ಥಳ ಭಾರತದಲ್ಲಿ ಎಲ್ಲಿ ಬೇಕಾದರೂ
ವೇತನ ನಿಯಮಾನುಸಾರ
ಅರ್ಜಿ ಸಲ್ಲಿಸುವ ವಿಧಾನ ಆನ್​ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 12/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 01/02/2022

ಹುದ್ದೆಯ ಮಾಹಿತಿ:

ಸಹಾಯಕ ಉಪಾಧ್ಯಕ್ಷ -ಸ್ವಾಧೀನ ಮತ್ತು ಸಂಬಂಧ ನಿರ್ವಹಣೆ-50
ಸಹಾಯಕ ಉಪಾಧ್ಯಕ್ಷ – ಉತ್ಪನ್ನ ನಿರ್ವಾಹಕ – 3

ಸ್ವೀಕೃತಿ ನಿರ್ವಹಣೆ ಇಲಾಖೆ

: NIMHANS Recruitment 2022: SSLC ಪಾಸಾದವರಿಗೆ ನಿಮ್ಹಾನ್ಸ್​ನಲ್ಲಿ ಉದ್ಯೋಗ, ಮಾಸಿಕ ವೇತನ 10 ಸಾವಿರ

ಮುಖ್ಯ ಕಾರ್ಯತಂತ್ರ -ಸ್ವೀಕೃತಿ ನಿರ್ವಹಣೆ, ಚಿಲ್ಲರೆ ವ್ಯಾಪಾರ, MSME, ಕೃಷಿ ಸಾಲಗಳು -1
ನ್ಯಾಷನಲ್ ಮ್ಯಾನೇಜರ್ ಟೆಲಿಕಾಲಿಂಗ್ – 1
ಮುಖ್ಯ ಯೋಜನೆ ಮತ್ತು ಪ್ರಕ್ರಿಯೆ- ಸ್ವೀಕಾರಾರ್ಹ ನಿರ್ವಹಣೆ -1
ರಾಷ್ಟ್ರೀಯ ಸ್ವೀಕೃತಿ ವ್ಯವಸ್ಥಾಪಕ – 3
ವಲಯ ಸ್ವೀಕೃತಿ ವ್ಯವಸ್ಥಾಪಕ -21
MIS ಮ್ಯಾನೇಜರ್ – 4
ದೂರು ನಿರ್ವಾಹಕ – 1
ಪ್ರಕ್ರಿಯೆ ನಿರ್ವಾಹಕ – 4
ಸಹಾಯಕ ಉಪಾಧ್ಯಕ್ಷ – ಕಾರ್ಯತಂತ್ರ ನಿರ್ವಾಹಕ – 1
ಏರಿಯಾ ಸ್ವೀಕೃತಿಯ ಮ್ಯಾನೇಜರ್ – 50
ಉಪಾಧ್ಯಕ್ಷ – ಕಾರ್ಯತಂತ್ರ ನಿರ್ವಾಹಕ – 3
ಉಪಾಧ್ಯಕ್ಷ – ಕಾರ್ಯತಂತ್ರ ನಿರ್ವಾಹಕ – 3
ವೆಂಡರ್ ಮ್ಯಾನೇಜರ್ – 3
ಅನುಸರಣೆ ವ್ಯವಸ್ಥಾಪಕ – 1
ಪ್ರಾದೇಶಿಕ ಸ್ವೀಕೃತಿ ವ್ಯವಸ್ಥಾಪಕ -48
ಒಟ್ಟು 198 ಹುದ್ದೆಗಳು

ಅರ್ಜಿ ಶುಲ್ಕ:
SC/SC/PWD- 100 ರೂ.
ಸಾಮಾನ್ಯ/ಒಬಿಸಿ/EWS- 600 ರೂ.

ವಿದ್ಯಾರ್ಹತೆ:
ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ:
ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಬ್ಯಾಂಕ್​ ಆಫ್​ ಬರೋಡಾ ನೇಮಕಾತಿಯ ಅಧಿಸೂಚನೆ ಪ್ರಕಾರ ಇರಬೇಕು.

: JOBS: ಧಾರವಾಡ ಕೃಷಿ ವಿಜ್ಞಾನ ಯೂನಿವರ್ಸಿಟಿಯಲ್ಲಿ Part-Time ಹುದ್ದೆಗಳು ಖಾಲಿ, ತಿಂಗಳಿಗೆ 40 ಸಾವಿರ ಸಂಬಳ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 12/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01/02/2022

ಉದ್ಯೋಗದ ಸ್ಥಳ:
ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ನೀಡಲಾಗುತ್ತದೆ.

ವೇತನ:
ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ.

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ​
ವೈಯಕ್ತಿಕ ಸಂದರ್ಶನ


Spread the love

About Laxminews 24x7

Check Also

ಜಿಲ್ಲಾಡಳಿತದ ವತಿಯಿಂದ ಭವ್ಯವಾಗಿ ಆಯೋಜಿಸಲಾದ ಕನ್ನಡ ರಾಜ್ಯೋತ್ಸವ

Spread the loveಬೆಳಗಾವಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಜಿಲ್ಲಾಡಳಿತದ ವತಿಯಿಂದ ಭವ್ಯವಾಗಿ ಆಯೋಜಿಸಲಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ