ಎಂಇಎಸ್ ನಾಯಕ ದೀಪಕ ಧಳವಿ ಮುಖಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜೈಲಿನಿಂದ ಬಿಡುಗಡೆಯಾದ ಕರ್ನಾಟಕ ನವ ನಿರ್ಮಾಣ ಸೇನೆಯ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂಪತ್‍ಕುಮಾರ್ ದೇಸಾಯಿ, ಜೈಲಿನಿಂದ ಬಿಡುಗಡೆಯಾದೆವೆಂದು ಸಂತಸ ಪಡಬೇಕೋ, ಅಥವಾ ನಮ್ಮ ಮೇಲೆ ನಮ್ಮ ಸರಕಾರವೇ ಕೇಸ್ ಹಾಕಿದ್ದಕ್ಕೆ ದುಃಖ ಪಡಬೇಕೋ ಒಂದೂ ತಿಳಿಯುತ್ತಿಲ್ಲ.
ಇನ್ನು ನಗರದಲ್ಲಿ ಪೊಲೀಸ್ ವಾಹನಗಳನ್ನು ಸುಟ್ಟು ಗ್ಲಾಸ್‍ಗಳನ್ನು ಪುಡಿ ಮಾಡಿದ ಆರೋಪಿಗಳ ಮೇಲೆ ಸರಕಾರ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಎಂಇಎಸ್ ನಿಷೇಧವಾಗುತ್ತೋ ಇಲ್ಲವೋ ಗೊತ್ತಿಲ್ಲ, ಈಗ ಬಂಧಿತರ ಮೇಲೆ ಏನು ಕ್ರಮ ಕೈಗೊಳ್ಳುತ್ತೆ ಎನ್ನುವ ಆಧಾರದ ಮೇಲೆ ಎಂಇಎಸ್ ಕುಗ್ಗುತ್ತಾ ಹೋಗುತ್ತದೆ. ಎಂಇಎಸ್ ಇಂಥ ಎಷ್ಟೇ ಪುಂಡಾಟಗಳನ್ನು ಮಾಡಿದರೂ ಕರ್ನಾಟಕ ನವ ನಿರ್ಮಾಣ ಸೇನೆ ಹೆದರುವುದಿಲ್ಲ. ನಾವು ಇದನ್ನೆಲ್ಲ ಎದುರಿದಲು ಸಿದ್ಧ ಹೋರಾಟವೆಂದ ಮೇಲೆ ನಾವು ಜೈಲಿಗೆ ಹೋಗುವುದು ಇವಕ್ಕೆಲ್ಲ ಹೆದರುವುದಿಲ್ಲ. ಎಷ್ಟೇ ತೊಂದರೆಗಳು ಬಂದರೂ ನಾವು ಕನ್ನಡಪರ ಹೋರಾಟಗಳನ್ನು ಬಿಡುವುದಿಲ್ಲ ಎಂದು ಎಂಇಎಸ್ ಪುಂಡರಿಗೆ ಎಚ್ಚರಿಕೆ ನೀಡಿದರು.