ಇದಕ್ಕೆ ಕಾರಣ ತೆಲುಗಿನವರು ‘ಒಂದು ‘ಪುಷ್ಪ’ 10 ‘ಕೆಜಿಎಫ್’ಗೆ (KGF Movie) ಸಮ’ ಎನ್ನುವ ಮಾತನ್ನು ಹೇಳಿದ್ದರು. ಚಿತ್ರ ತೆರೆಕಂಡ ನಂತರದಲ್ಲಿ ಈ ಹೇಳಿಕೆಗೆ ಅರ್ಥವಿಲ್ಲ ಎಂಬುದು ಸಾಬೀತಾಯಿತು. ಅನೇಕರು ಟ್ವಿಟರ್ನಲ್ಲಿ ‘ಪುಷ್ಪ’ ಚಿತ್ರವನ್ನು ಟೀಕೆ ಮಾಡೋಕೆ ಆರಂಭಿಸಿದರು. ‘ಯಶ್ (Yash) ಅಭಿನಯದ ‘ಕೆಜಿಎಫ್’ ಬೆಸ್ಟ್’ ಎಂದು ಹೊಗಳಿಕೊಳ್ಳೋಕೆ ಶುರು ಮಾಡಿದರು. ‘ಪುಷ್ಪ’ ಸಿನಿಮಾ ಈಗ ಒಟಿಟಿಗೆ ಕಾಲಿಟ್ಟಿದೆ. ಚಿತ್ರಮಂದಿರದಲ್ಲಿ ಈ ಚಿತ್ರ ನೋಡದೇ ಇದ್ದ ಅನೇಕರು ಈಗ ಸಿನಿಮಾವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಒಟಿಟಿಯಲ್ಲಿ ‘ಪುಷ್ಪ’ ನೋಡಿದ ನಂತರದಲ್ಲಿ ಕೆಲವರಿಗೆ ‘ಪುಷ್ಪ’ ಕಥೆಯ ಬಗ್ಗೆ ಅನುಮಾನ ಮೂಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳಲಾಗುತ್ತಿದೆ.
ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್’ ಸಖತ್ ಮನರಂಜನೆ ನೀಡಿತ್ತು. ಬಡ ಕುಟುಂಬದ ಹುಡುಗನೊಬ್ಬ ಡಾನ್ ಆಗಿ ಬೆಳೆಯುತ್ತಾನೆ ಎನ್ನುವ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಇದರ ಜತೆಗೆ ಕೆಜಿಎಫ್ ಚಿನ್ನದ ಗಣಿಯನ್ನು ಕೂಡ ಹೈಲೈಟ್ ಮಾಡಲಾಗಿದೆ. ‘ಪುಷ್ಪ’ ಚಿತ್ರದ ಕಥೆಯೂ ಇದೇ ರೀತಿ ಇದೆ ಎಂದು ಕೆಲವರು ಬರೆದುಕೊಂಡಿದ್ದಾರೆ. ಬಡ ಕುಟುಂಬದಿಂದ ಬಂದ ಹುಡುಗ ರಕ್ತಚಂದನ ದಂಧೆಗೆ ಇಳಿದು ಹೇಗೆ ಡಾನ್ ಆಗಿ ಬೆಳೆಯುತ್ತಾನೆ ಎನ್ನುವ ಕಥೆಯನ್ನು ಈ ಚಿತ್ರ ಹೇಳಲಾಗಿದೆ. ಹಾಗಾದರೆ, ನೆಟ್ಟಿಗರು ಮಾಡಿದ ಹೋಲಿಕೆ ಏನು? ಇಲ್ಲಿದೆ ಉತ್ತರ.
‘ಪುಷ್ಪ ಚಿತ್ರ ತಂಡದವರು ಕೆಜಿಎಫ್ ಚಿತ್ರವನ್ನು ನೋಡಿ ಕಾಪಿ ಮಾಡುತ್ತಿದ್ದಾರೆ’ ಎಂದು ಅರ್ಥ ಬರುವ ರೀತಿಯಲ್ಲಿ ಟ್ವೀಟ್ ಒಂದನ್ನು ಮಾಡಲಾಗಿದೆ. ಇದಕ್ಕೆ ಕೆಲವರು ‘ಕೆಜಿಎಫ್ ಕಥೆ ಆಧರಿಸಿಯೇ ಪುಷ್ಪ ಸಿನಿಮಾ ರೆಡಿ ಆಗಿದೆ’ ಎಂದು ಬರೆದುಕೊಂಡಿದ್ದಾರೆ. ಇನ್ನು, ಈ ಟ್ವೀಟ್ಗೆ ಒಂದು ಕಮೆಂಟ್ ಬಂದಿದೆ. ಈ ಕಮೆಂಟ್ನಲ್ಲಿ ಎರಡೂ ಚಿತ್ರಕ್ಕೆ ಇರುವ ಸಾಮ್ಯತೆ ವಿಚಾರಗಳು ಏನು ಎಂಬುದನ್ನು ಬರೆಯಲಾಗಿದೆ.