Breaking News

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಹಿನ್ನಲೆ: ಸಚಿವ ಗೋವಿಂದ ಕಾರಜೋಳರಿಂದ ಮತ್ತೊಂದು ದಾಖಲೆ ಬಿಡುಗಡೆ

Spread the love

ಬಾಗಲಕೋಟೆ: ಮೇಕೆದಾಟು ಯೋಜನೆಯನ್ನು ಜಾರಿಗೊಳಿಸುವ ಕುರಿತು 2013 ರಿಂದ 2018 ರವರೆಗೆ ಅಂದಿನ ಸಿದ್ದರಾಮಯ್ಯನವರ ಸರಕಾರದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಪಶುಸಂಗೋಪನಾ ಮತ್ತು ಮುಜರಾಯಿ ಸಚಿವರಾಗಿದ್ದ, ಟಿ.ಬಿ.ಜಯಚಂದ್ರ ರವರು ಮುಖ್ಯಮಂತ್ರಿಗಳಿಗೆ ಕಳುಹಿಸಿದ್ದ ಸಕರಾತ್ಮಕ ಟಿಪ್ಪಣಿ ಹಾಗೂ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಅನುಮೋದನೆಯ ನಂತರವೂ ಅಂದಿನ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಯಾವುದೇ ಕ್ರಮ ಕೈಗೊಳ್ಳದೇ ನಿಷ್ಕ್ರಿಯರಾಗಿದ್ದರು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇಂದು ಕಟುವಾಗಿ ಟೀಕಿಸಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಅಂದಿನ ಕಾನೂನು ಸಚಿವರು ಕಡತದ LAW 15 CWD 2013 ನಲ್ಲಿ ಮಾಡಿದ ಟಿಪ್ಪಣಿಯನ್ನು ವಿವರಿಸಿದರು.

 

‘ಕಾವೇರಿ ನೀರು ಹಂಚಿಕೆ ವಿಷಯದ ಬಗ್ಗೆ ರಚಿತವಾಗಿರುವ ಕಾವೇರಿ ಜಲ ವಿವಾದ ನ್ಯಾಯಾಧಿಕರಣ ನೀಡಿರುವ ಆದೇಶ ತಮಗೆ ತಿಳಿದಿರುವ ವಿಷಯವಾಗಿದೆ. ಸದರಿ ನ್ಯಾಯಾಧಿಕರಣದ ಅಂತಿಮ ಆದೇಶದಂತೆ ಕರ್ನಾಟಕ ರಾಜ್ಯವು ತನ್ನ ಪಾಲಿನ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಮತ್ತು ಸದರಿ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆ ಇರುತ್ತದೆ. ಅದರಂತೆ ಮೇಕೆದಾಟು ಜಲವಿದ್ಯುತ್ ಸಮಸ್ಯೆಯು ಗಂಭೀರವಾಗಿರುವುದರಿಂದ ಹಾಗೂ ನಾವು ಜನತೆಗೆ ನೀಡಿರುವ ಭರವಸೆಯಂತೆ ವಿದ್ಯುತ್ ಉತ್ಪಾದನೆಯನ್ನು ಹೆಚ್ಚು ಮಾಡಲೇಬೇಕಾದ ಅನಿವಾರ್ಯತೆ ಹಿನ್ನೆಲೆಯಲ್ಲಿ ಈ ಪ್ರತಿಷ್ಟಿತ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಈಗಾಗಲೇ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವಲ್ಲಿ ಸಾಕಷ್ಟು ವಿಳಂಬವಾಗಿದೆ. ಈ ಯೋಜನೆಯನ್ನು ಕೈಗೆತ್ತಿಕೊಳ್ಳುವ ಸಂಬಂಧ ಮೇಲ್ಕಂಡ ಕಂಡಿಕೆಗಳಲ್ಲಿ ಅಡ್ವೋಕೇಟ್ ಜನರಲ್ ರವರು ನೀಡಿರುವ ಸಕಾರಾತ್ಮಕ ಅಭಿಪ್ರಾಯ ಮತ್ತು ಇತರೆ ಮಾಹಿತಿಯನ್ನು ಅವಗಾಹಿಸಿ ಈ ಕೂಡಲೇ ಯೋಜನೆಯನ್ನು ಪ್ರಾರಂಭಿಸಲು ಸಂಬಂಧಪಟ್ಟವರಿಗೆ ಸೂಕ್ತ ಆದೇಶ ನೀಡಬೇಕಾಗಿದೆ ಕೋರಿದೆ’. ಎಂದು ವಿವರವಾದ ಮತ್ತು ಸ್ಪಷ್ಟವಾದ ಟಿಪ್ಪಣಿಯನ್ನು ಮುಖ್ಯಮಂತ್ರಿಗಳಿಗೆ ಕಡತದಲ್ಲಿ ಕಳುಹಿಸಿದ್ದಾರೆ. ಮತ್ತು ಅಂದು ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಈ ಟಿಪ್ಪಣಿಯನ್ನು ಅನುಮೋದಿಸಿ, ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲ್ರಿಗೆ ಕಳುಹಿಸಿದ್ದು ಸರ್ಕಾರದ ಕಡತಗಳಲ್ಲಿ ದಾಖಲಾಗಿದೆ ಎಂದು ಗೋವಿಂದ ಕಾರಜೋಳ ರವರು ವಿವರಿಸಿದ್ದಾರೆ.


Spread the love

About Laxminews 24x7

Check Also

ಕೊಪ್ಪಳದ ಗಾಂಜಾ ಪ್ರಕರಣ ಶಿಫ್ಟ್ ವಿಚಾರ: ಗಂಗಾವತಿಗೆ ಮಸಿ ಬಳಿಯುವ ಯತ್ನ ಎಂದ ಜನಾರ್ದನ ರೆಡ್ಡಿ

Spread the loveಗಂಗಾವತಿ: ರಾಮಾಯಣದಂತ ಪೌರಾಣಿಕ ಹಿನ್ನೆಲೆ, ವಿಜಯನಗರದ ಐತಿಹಾಸಿಕ ಹಿನ್ನೆಲೆಯ ನಂಟು ಹೊಂದಿರುವ ಗಂಗಾವತಿಯಂಥ ಕ್ಷೇತ್ರಕ್ಕೆ ಪೊಲೀಸ್ ಮತ್ತು ಅಬಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ