ಬೆಂಗಳೂರು: ವೀಕೆಂಡ್ ಕರ್ಫ್ಯೂ ವೇಳೆ ನಗರದಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದ 864 ದ್ವಿಚಕ್ರ ವಾಹನ, 26 ಆಟೋ, 54 ಕಾರು ಸೇರಿದಂತೆ ಒಟ್ಟು 944 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪಶ್ಚಿಮ ವಿಭಾಗದಲ್ಲಿ ಅತಿ ಹೆಚ್ಚು- 414, ದಕ್ಷಿಣ ವಿಭಾಗದಲ್ಲಿ – 171, ಉತ್ತರ ವಿಭಾಗದಲ್ಲಿ- 147 ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 2021 ಡಿಸೆಂಬರ್ 28ರಿಂದ ಜನವರಿ 9 ರ ವರೆಗೆ ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳ ವಿರುದ್ಧ 1,484 ಕೇಸ್ ದಾಖಲಿಸಲಾಗಿದೆ..
ವೀಕೆಂಡ್ ಕರ್ಫ್ಯೂ ವೇಳೆ ಮಾಸ್ಕ್ ಧರಿಸದೇ ಓಡಾಡುತ್ತಿದ್ದವರ ವಿರುದ್ಧ 1,515 ಪ್ರಕರಣ ದಾಖಲಿಸಿಕೊಂಡು 3,78,750 ರೂ. ದಂಡ ಸಂಗ್ರಹಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವ ಸಂಬಂಧ 26 ಪ್ರಕರಣ ದಾಖಲಿಸಿಕೊಂಡು 6,500 ರೂ. ದಂಡ ಸಂಗ್ರಹಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.