ಬೆಂಗಳೂರು: ನಗರದಲ್ಲಿ ಅಂಗವಿಕಲನಂತೆ ಸುಳ್ಳು ವೇಷಧರಿಸಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯ ವಿಡಿಯೋ ಎಲ್ಲೆಡೆ ವೈರಲ್ (Viral video) ಆಗುತ್ತಿದೆ.
ಎರಡೂ ಕೈಗಳಿದ್ದರೂ, ಒಂದು ಕೈಯನ್ನು ಬಟ್ಟೆಯೊಳಗೆ ಹಾಕಿ ಕೈಯಿಲ್ಲದಂತೆ ಹಾಗೂ ಮತ್ತೊಂದು ಕೈಯಲ್ಲಿ ಊರುಗೋಲು ಹಿಡಿದು ಭಿಕ್ಷೆ ಬೇಡುತ್ತಿದ್ದ ವ್ಯಕ್ತಿ ಸಾರ್ವಜನಿಕರೊಬ್ಬರ ಕೈಗೆ ಸಿಕ್ಕಿಬಿದ್ದಿರುವ ವಿಡಿಯೋ ಈಗ ವೈರಲ್ ಆಗಿದೆ.
ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ನಲ್ಲಿ (South End Circle) ನಕಲಿ ಅಂಗವಿಕಲರೊಬ್ಬರು ವಾಹನ ಸವಾರರ ಬಳಿ ಭಿಕ್ಷೆ ಬೇಡುತ್ತಿದ್ದರು. ಅಂಗವಿಕಲನಂತೆ ವೇಷ ಧರಿಸಿ ಭಿಕ್ಷಾಟನೆ ಮಾಡುತ್ತಿದ್ದ ವ್ಯಕ್ತಿಯ ಅಸಲಿ ಮುಖವನ್ನು ವಾಹನಸವಾರರೊಬ್ಬರು ಬಯಲಿಗೆಳೆದಿದ್ದಾರೆ.
Viral video:ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ನಲ್ಲಿ ಅಂಗವಿಕಲನಂತೆ ವೇಷ ಧರಿಸಿ ಭಿಕ್ಷಾಟನೆ, ಸಾರ್ವಜನಿಕರ ಕೈಯಲ್ಲಿ ಸಿಕ್ಕಿಬಿದ್ದ