Breaking News

ನ್ನ ಮಗಳು ವಿದೇಶದಲ್ಲಿ ಓದ್ತಾ ಇದ್ದಾಳೆ, ಮಿನಿಸ್ಟರ್ ಮಗನ ಬ್ಲಾಕ್ ಮೇಲ್ ಪ್ರಕರಣದಲ್ಲಿ ಯಾವುದೇ ಪಾತ್ರವಿಲ್ಲ – ಇಂಡಿ ಶಾಸಕ

Spread the love

ವಿಜಯಪುರ: ಸಚಿವ ಎಸ್.ಟಿ.ಸೋಮಶೇಖರ್ ಪುತ್ರ ನಿಶಾಂತ್ ಗೆ ಬ್ಲ್ಯಾಕ್ ಮೇಲ್ ಸಂಬಂಧ ಶಾಸಕರ ಪುತ್ರಿಯ ಪಾತ್ರವಿದೆ ಎನ್ನಲಾಗುತ್ತಿತ್ತು. ಆದ್ರೇ.. ನನ್ನ ಮಗಳ ಯಾವುದೇ ಪಾತ್ರವಿಲ್ಲ. ಆಕೆ ವಿದೇಶದಲ್ಲಿ ಓದುತ್ತಾ ಇದ್ದಾಳೆ. ಸಿಸಿಬಿಗೆ ಎಲ್ಲಾ ಮಾಹಿತಿ ತಿಳಿಸಿರೋದಾಗಿ ಇಂಡಿ ಶಾಸಕರ ಯಶವಂತರಾಯಗೌಡ ಪಾಟೀಲ್ ಸ್ಪಷ್ಟ ಪಡಿಸಿದ್ದಾರೆ.

 

ಈ ಬಗ್ಗೆ ಇಂದು ಸುದ್ದಿಗಾರರಿಗೆ ಮಾಹಿತಿ ನೀಡಿರುವಂತ ಅವರು, ನನ್ನ ಮಗಳು ವಿದೇಶದಲ್ಲಿ ಓದುತ್ತಿದ್ದಾಳೆ. ಆಕೆ ಬಳಸುತ್ತಿದ್ದಂತ ಸಿಮ್ ಅನ್ನು ಅವಳ ಸ್ನೇಹಿತನ ಕ್ಲೈಂಟ್ ಗೆ ಬೇಕು ಎಂದು ತಿಳಿಸಿದ ಕಾರಣ, ಸ್ನೇಹಿತನಿಗೆ ನೀಡಿದ್ದಾಳೆ. ಆಕೆಯ ಸ್ನೇಹಿತ ರಾಹುಲ್ ಭಟ್ ಗೆ ನೀಡಿದ್ದಾರೆ. ಆ ಸಿಮ್ ಕಾರ್ಡ್ ನಿಂದಲೇ ಬ್ಲ್ಯಾಕ್ ಮೇಲ್ ನಡೆದಿದೆ ಎಂದು ತಿಳಿಸಿದರು.

 

ಡಿಸೆಂಬರ್ 28ರಂದು ಸಿಸಿಬಿ ಅಧಿಕಾರಿಗಳಿಂದ ನೋಟಿಸ್ ಬಂದ ನಂತ್ರವೇ ಈ ಎಲ್ಲಾ ವಿಚಾರ ನನಗೆ ತಿಳಿದು, ಆಕೆಯನ್ನು ವಿಚಾರಿಸಿದಾಗ ನನಗೂ ತಿಳಿಯಿತು. ರಾಕೇಷ್ ಅಪ್ಪಣ್ಣ ಮತ್ತು ರಾಹುಲ್ ಭಟ್ ಇಬ್ಬರು ಸ್ನೇಹಿತರು. ನನ್ನ ಪುತ್ರಿಗೂ ಬ್ಲ್ಯಾಕ್ ಮೇಲ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಸಿಸಿಬಿ ಅಧಿಕಾರಿಗಳಿಗೆ ಎಲ್ಲವನ್ನು ಮಾಹಿತಿ ನೀಡಿದ್ದೇನೆ ಎಂದು ಹೇಳಿದರು.

ಸಿಸಿಬಿ ತನಿಖೆಗೆ ಎಲ್ಲಾ ಸಹಕಾರ ನೀಡುತ್ತೇನೆ. ಸಚಿವ ಸೋಮಶೇಖರ್ ಅವರನ್ನು ಭೇಟಿ ಮಾಡಿ ಮಾತನಾಡುವೆ. ನಾವು ಸಾರ್ವಜನಿಕ ಜೀವನದಲ್ಲಿ ಇರೋರು. ನಮ್ಮ ನಮ್ಮಲ್ಲಿ ಯಾವುದೇ ಮುಚ್ಚುಮರೆ ಇರಬಾರದು ಎಂದು ತಿಳಿಸಿದರು.


Spread the love

About Laxminews 24x7

Check Also

ಅನಾರೋಗ್ಯದಿಂದ ತಾಯಮ್ಮ ಹುಲಿ ಸಾವು

Spread the loveಮೈಸೂರು: ಚಾಮರಾಜೇಂದ್ರ ಮೃಗಾಲಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಹೆಣ್ಣು ಹುಲಿ ತಾಯಮ್ಮ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮುಂಜಾನೆ 3.45ರ ಸಮಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ