ಬೆಳಗಾವಿ: ನಿರ್ಜನ ಪ್ರದೇಶದ ಪಾಳುಮನೆಯೊಂದರಲ್ಲಿ ತಲೆ ಛಿದ್ರಗೊಂಡಿದ್ದ ಶವ ಪತ್ತೆಯಾಗಿದೆ. ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಪ್ರಕರಣ ಇದಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ಬೆಳಗಾವಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದ ನಿರ್ಜನ ಪ್ರದೇಶದಲ್ಲಿ ಇರುವ ಪಾಳು ಬಿದ್ದಿರುವ ಮನೆಯಲ್ಲಿ ಶವವೊಂದು ಪತ್ತೆಯಾಗಿದ್ದು, ತಲೆ ಬಹುತೇಕ ಛಿದ್ರಗೊಂಡಿದೆ.
ಆಟೋ ಚಾಲಕ ನೂಹಾನ್ ಧಾರವಾಡಕರ್ (23) ಎಂಬಾತ ಕೊಲೆಗೀಡಾದವ ಎಂಬುದು ಪತ್ತೆಯಾಗಿದೆ.
ಈತ ಕಳೆದ ಐದು ದಿನಗಳ ಹಿಂದೆ ಮನೆಯಿಂದ ಹೊರಹೋಗಿದ್ದು, ನಾಲ್ಕು ದಿನಗಳ ಹಿಂದೆ ಕೊಲೆಯಾಗಿ ಹೋಗಿದ್ದಾನೆ. \ ಸ್ಥಳಕ್ಕೆ ಮಾಳಮಾರುತಿ ಪೊಲೀಸರು ಹಾಗೂ ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಭೇಟಿ ಪರಿಶೀಲನೆ ನಡೆಸಿದ್ದಾರೆ.