ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಜಂಬಗಿ ಸಂಬರಗಿ ಅರಳಿಹಟ್ಟಿ ಜಕ್ಕರಟ್ಟಿ ಬೊಮ್ಮನ್ನಾಳ ಗ್ರಾಮದಲ್ಲಿ ಸುಮಾರು 40ಕ್ಕೂ ಹೆಚ್ಚು ಹಸು ಗೂಳಿಗಳ ಗ್ಯಾಂಗ್ ದಿನಾಲೂ ಬೆಳೆಗಳಿಗೆ ನುಗ್ಗಿ ನಾಶಪಡಿಸುತ್ತಿವೆ. ರೈತರು ಹಗಲು ರಾತ್ರಿ ಕೈಯಲ್ಲಿ ಕೋಲು ಹಿಡಿದು ಇವುಗಳನ್ನು ಓಡಿಸಲು ಹರಸಾಹಸ ಪಡುತ್ತಿದ್ದಾರೆ.
ಈ ಹಸುಗಳು ಸುಮಾರು ವರ್ಷಗಳಿಂದ ಇದೆ ರೀತಿ ದಾಳಿ ಮಾಡುತ್ತಿವೆ ಇವು ನಿಜವಾಗಲೂ ಯಾರಿಗೆ ಸಂಭಧಪಟ್ಟ ಹಸುಗಳಿವೆ ಅನ್ನೋದು ಯಾರಿಗೂ ಗೊತ್ತಾಗುತ್ತಿಲ್ಲ.
ಫಲವತ್ತಾಗಿ ಬೇಳೆದ ಜೋಳ ಗೋದಿ ದ್ರಾಕ್ಷಿ ಮುಸುಕಿನ ಜೋಳದ ಬೆಳೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶ ಪಡಿಸುತ್ತಿವೆ. ರೈತರು ಓಡಿಸಲು ಹೋದ್ರೆ ಒಮ್ಮೊಮ್ಮೆ ಅವರ ಮೇಲೆ ಎರಗಿದ ಸನ್ನಿವೇಶಗಳು ನಡೆದಿವೆ.
ಗೂಳಿಗಳು ರಾತ್ರಿ ಹೊತ್ತು ರೈತರು ಸಾಕಿದ ದನ ಕರುಗಳ ಮೇಲೆ ಹಲ್ಲೆ ಮಾಡುತ್ತಿವೆ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಆಚಾತುರ್ಯ ನಡಿಯೋ ಮೊದಲೇ ಎಚೆತ್ತುಕೊಂಡು ಗುಳಿಗಳನ್ನ ಹಿಡಿದು ಗೋಶಾಲೆಗೆ ಅಥವಾ ಪರ್ಯಾಯ ವೆವಸ್ಥೆ ಕಲ್ಪಿಸಿ ಕೊಡಬೇಕೆಂದು ರೈತರು ಮನವಿ ಮಾಡಿದ್ದಾರೆ.