Breaking News

ಬೆಳಗಾವಿಯ ನೂತನ ಡಿಸಿಪಿಯಾಗಿ ರವೀಂದ್ರ ಗಡಾದಿ ನೇಮಕ

Spread the love

ಬೆಳಗಾವಿಯ ನೂತನ ಡಿಸಿಪಿಯಾಗಿ ರವೀಂದ್ರ ಗಡಾದಿ ನೇಮಕವಾಗಿದ್ದಾರೆ.

ಡಿಸಿಪಿಯಾಗಿದ್ದ ವಿಕ್ರಂ ಅಮಟೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ರವೀಂದ್ರ ಗಡಾದಿ ಅವರನ್ನು ನೇಮಕ ಮಾಡಲಾಗಿದೆ.

ರವೀಂದ್ರ ಗಡಾದಿ 2017ರ ಐಪಿಎಸ್ ಕೇಡರ್ ಆಗಿದ್ದು, ಈ ಹಿಂದೆ ಬೆಳಗಾವಿಯಲ್ಲಿ ಎಎಸ್ಪಿಯಾಗಿ ಕೆಲಸ ಮಾಡಿದ್ದಾರೆ. ಮೂಲತಃ ಅಥಣಿಯವರಾದ ಗಡಾದಿ, ಸಧ್ಯಕ್ಕೆ ಹೆಸ್ಕಾಂ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಈಚಿನ ಬೆಳಗಾವಿ ಗಲಭೆಗೆ ಪೊಲೀಸ್ ವೈಫಲ್ಯವೇ ಕಾರಣ ಎಂದು ಶಾಸಕ ಅಭಯ ಪಾಟೀಲ ಆರೋಪಿಸಿದ್ದರು. ನಂತರ ಪೊಲೀಸ್ ಆಯುಕ್ತರನ್ನು ವರ್ಗಾವಣೆ ಮಾಡಲಾಗಿತ್ತು. ಇದೀಗ ಡಿಸಿಪಿಯನ್ನೂ ವರ್ಗಾವಣೆ ಮಾಡಲಾಗಿದೆ.

ಡಿಸಿಪಿ ವಿಕ್ರಂ ಅಮಟೆ ಬೆಳಗಾವಿಯಲ್ಲಿ ಜನಸ್ನೇಹಿ ಆಡಳಿತ ತರುವಲ್ಲಿ ಮುಂಚೂಣಿ ಪಾತ್ರ ವಹಿಸಿದ್ದರು. ಅವರಿಗೆ ಯಾವುದೇ ಪೋಸ್ಟ್ ತೋರಿಸಲಾಗಿಲ್ಲ


Spread the love

About Laxminews 24x7

Check Also

ಕಾರ್ ಹಾಗೂ ಕೆ ಎಸ್ ಆರ್ ಟಿ ಸಿ. ಬಸ್ ಮಧ್ಯ ಭೀಕರ ಅಪಘಾತ

Spread the love ಅಥಣಿ ಹೊರವಲಯದಲ್ಲಿ ಬಸ್- ಕಾರ ಮಧ್ಯೆ ಭೀಕರ ಅಪಘಾತ ಕಾರ್ ಹಾಗೂ ಕೆ ಎಸ್ ಆರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ