ಹೊಸ ವರ್ಷ ಆರಂಭವಾದ ಬಳಿಕ ಸರ್ಕಾರ ಜನವರಿಯಿಂದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.
ATM ವಿತ್ಡ್ರಾವಲ್ ಶುಲ್ಕ, ITR ಫೈಲಿಂಗ್, ಕ್ಯಾಶ್ ಹಿಂಪಡೆಯುವ ಶುಲ್ಕ, LPG ಗ್ಯಾಸ್ ಸಿಲಿಂಡರ್ ಬೆಲೆ ಪರಿಷ್ಕರಣೆ… ಹೀಗೆ ಮುಂತಾದ ವಿಷಯಗಳಲ್ಲಿ ಬದಲಾವಣೆ ಮಾಡಿದೆ, ಇದರ ಭಾಗವಾಗಿ ನಾವು ಈಗ ಹೇಳುತ್ತಿರುವುದು ಕಾಂಪೋಸಿಟ್ ಸಿಲಿಂಡರ್ ಬಗ್ಗೆ. ಅವು ಸಾಮಾನ್ಯ ಸಿಲಿಂಡರ್ಗಳಿಗಿಂತ ಕಡಿಮೆ ತೂಕವನ್ನು ಹೊಂದಿರುತ್ತವೆ.
ಗ್ಯಾಸ್ ಸಿಲಿಂಡರ್ ಸಬ್ಸಿಡಿ, ಎಲ್‌ಪಿಜಿ ಸಿಲಿಂಡರ್ ಬೆಲೆ, ಇಂಡಿಯನ್ ಗ್ಯಾಸ್ ಸಿಲಿಂಡರ್ ಬೆಲೆ, ಭಾರತ್ ಗ್ಯಾಸ್ ಸಿಲಿಂಡರ್ ಬೆಲೆ, ಎಲ್‌ಪಿಜಿ ಸಬ್ಸಿಡಿ ಕಾಂಪೋಸಿಟ್ ಗ್ಯಾಸ್ ಸಿಲಿಂಡರ್ 10 ಕೆಜಿ ಗ್ಯಾಸ್ ಅನ್ನು ಹೊಂದಿರುತ್ತವೆ. ಇವು 7 ಕೆಜಿಗಿಂತಲೂ ಕಡಿಮೆ ತೂಕವನ್ನು ಹೊಂದಿದ್ದು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಸುಲಭವಾಗಿರುತ್ತದೆ.
ಸಾಮಾನ್ಯವಾಗಿ ನಾವು ಬಳಸುತ್ತಿರುವ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ನಲ್ಲಿ 14.2 ಕೆಜಿ ಗ್ಯಾಸ್ ಇದೆ. ಸಿಲಿಂಡರ್ 17 ಕೆ.ಜಿ. ಇರುತ್ತದೆ. ಅಂದರೆ ಒಟ್ಟು ತೂಕ 30 ಕೆಜಿಗಿಂತ ಹೆಚ್ಚಿದೆ. ಆದರೆ ಇವುಗಳಿಗೆ ಹೋಲಿಸಿದರೆ ಕಾಂಪೋಸಿಟ್ ಸಿಲಿಂಡರ್‌ನ ತೂಕ ಕಡಿಮೆ ಇರುತ್ತದೆ.
ಕಾಂಪೋಸಿಟ್ ಸಿಲಿಂಡರ್ 10 ಕೆಜಿ ಗ್ಯಾಸ್ನ್ನು ಹೊಂದಿರುತ್ತದೆ. ಸಿಲಿಂಡರ್ ತೂಕ ಕೂಡ 10 ಕೆ.ಜಿ ಇರುತ್ತದೆ. ಒಟ್ಟಾರೆ ಸಿಲಿಂಡರ್ ತೂಕ 20 ಕೆ.ಜಿ ಇರುತ್ತದೆ. ಹೀಗಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಒಯ್ಯಲು ತುಂಬಾ ಸುಲಭ.
ಕಾಂಪೋಸಿಟ್ ಸಿಲಿಂಡರ್ಅನ್ನು ಗ್ಯಾಸ್ ಕಂಪನಿಗಳು ಸ್ಮಾರ್ಟ್ ಸಿಲಿಂಡರ್ ಎಂದು ಕರೆಯುತ್ತವೆ. ಹಗುರ ಆದರೆ ತುಂಬಾ ಗಟ್ಟಿಮುಟ್ಟಾಗಿದೆ. ಇದನ್ನು ಮೂರು ಪದರಗಳೊಂದಿಗೆ ಗಟ್ಟಿಯಾಗಿ ವಿನ್ಯಾಸಗೊಳಿಸಲಾಗಿದೆ. ತುಕ್ಕು ಹಿಡಿಯುವುದಿಲ್ಲ, ನೋಟವೂ ಆಕರ್ಷಕವಾಗಿದೆ.
ಗ್ಯಾಸ್ ಕಂಪನಿಗಳು ಕಾಂಪೋಸಿಟ್ ಸಿಲಿಂಡರ್‌ಗಳನ್ನು ಮತ್ತು ಕನ್ವೆನ್ಶನಲ್ ಸಿಲಿಂಡರ್‌ಗಳನ್ನು ಮಾರಾಟ ಮಾಡುತ್ತವೆ. ಇಂಡಿಯನ್ ಆಯಿಲ್ ಬೆಲೆಯ ಪ್ರಕಾರ, ದೆಹಲಿಯಲ್ಲಿ ಇದರ ಬೆಲೆ 634 ರೂ. ಇದ್ದರೆ, ಜೈಪುರದಲ್ಲಿ 637 ರೂ.ಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ 634 ಮತ್ತು ರೂ. 652, ಚೆನ್ನೈನಲ್ಲಿ ರೂ. 645 ಕ್ಕೆ ಲಭ್ಯವಿದೆ.
ನಾವು ಬಳಸುವ ಸಿಲಿಂಡರ್‌ಗಳನ್ನು BIS 3196 ಮಾನದಂಡವನ್ನು ಬಳಸಿ ತಯಾರಿಸಲಾಗುತ್ತದೆ. ಅವುಗಳ ಜೀವಿತಾವಧಿ (Lifespan) 15 ವರ್ಷಗಳು. ಇವುಗಳನ್ನು ಎರಡು ಬಾರಿ ಪರೀಕ್ಷಿಸಲಾಗುತ್ತದೆ. ಮೊದಲ ಪರೀಕ್ಷೆಯನ್ನು 10 ವರ್ಷಗಳ ನಂತರ ಮತ್ತು ಎರಡನೆಯದು 5 ವರ್ಷಗಳ ನಂತರ ಮಾಡಲಾಗುತ್ತದೆ.
ಕಾಂಪೋಸಿಟ್ ಸಿಲಿಂಡರ್ ಬೆಲೆ ಲಕ್ನೋದಲ್ಲಿ 660 ರೂ., ಪಾಟ್ನಾದಲ್ಲಿ 697 ರೂ., ಇಂದೋರ್‌ನಲ್ಲಿ 653 ರೂ., ಭೋಪಾಲ್‌ನಲ್ಲಿ 638 ರೂ. ಮತ್ತು ಗೋರಖ್‌ಪುರದಲ್ಲಿ 677 ರೂ.ಗಳಲ್ಲಿ ಲಭ್ಯವಿದೆ. ಕಡಿಮೆ ಗ್ಯಾಸ್ ಬಳಸುವ ಸಣ್ಣ ಕುಟುಂಬಗಳಿಗೆ ಇವು ತುಂಬಾ ಉಪಯುಕ್ತವಾಗಿವೆ.
ಹೈದರಾಬಾದ್‌ನಲ್ಲಿ ಕಾಂಪೋಸಿಟ್ ಸಿಲಿಂಡರ್‌ನ ಬೆಲೆ 670 ರೂ.ಗಳಾಗಿದ್ದು, ಹೈದರಾಬಾದ್‌ನಲ್ಲಿ ಇಂಡೇನ್ ಗ್ಯಾಸ್‌ನ ಒಟ್ಟು 11 ಏಜೆನ್ಸಿಗಳು ಈ ಸಿಲಿಂಡರ್‌ಗಳನ್ನು ಮಾರಾಟ ಮಾಡುತ್ತಿವೆ. ಆ ವಿವರಗಳನ್ನು ಇಂಡಿಯನ್ ಆಯಿಲ್ ವೆಬ್‌ಸೈಟ್‌ನಲ್ಲಿ ಕಾಣಬಹುದು.