ಬೆಳಗಾವಿ ದಿನದಿಂದ ದಿನಕ್ಕೆ ಸ್ಮಾರ್ಟ ಆಗುತ್ತಿದೆ ಎಂದು ಇಲ್ಲೊಂದು ಸ್ಮಾರ್ಟ ಬಸ್‍ಸ್ಟಾಂಡ್‍ನ್ನು ನಿರ್ಮಾಣ ಮಾಡಲಾಗಿತ್ತು. ಈ ಬಸ್‍ಸ್ಟಾಂಡ್‍ನ್ನು ಮುಖ್ಯಮಂತ್ರಿಗಳೇ ಉದ್ಘಾಟನೆ ಮಾಡಿ ಇನ್ನು 15 ದಿನ ಕಳೆದಿಲ್ಲ. ಅಷ್ಟರೊಳಗೆ ಈ ಬಸ್‍ಸ್ಟಾಂಡ್ ದನದ ಕೊಟ್ಟಿಗೆ ಆಗಿಬಿಟ್ಟಿದೆ. ಈ ಬಸ್‍ಸ್ಟಾಂಡ್‍ಗೆ ಹೇಳೋವರಿಲ್ಲ..ಕೇಳವರಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು ಬಸ್‍ಸ್ಟಾಂಡ್‍ನಲ್ಲಿಯೇ ಆರಾಮವಾಗಿ ಓಡಾಡುತ್ತಿರುವ ಎಮ್ಮೆ ಕರು, ಕಂಠಪೂರ್ತಿ ಸಾರಾಯಿ ಕುಡಿದು ಎಲ್ಲೆಂದರಲ್ಲಿ ಮಲಗಿರುವ ವ್ಯಕ್ತಿ, ಕಸದ ರಾಶಿಯಿಂದ ಸುತ್ತಲೂ ದುರ್ವಾಸನೆ, ಬೀದಿ ನಾಯಿಗಳ ಭೀತಿಯಲ್ಲಿರುವ ಪ್ರಯಾಣಿಕರು..ಹೌದು ನೀವು ನೋಡುತ್ತಿರುವ ಈ ದೃಶ್ಯ ಬೆಳಗಾವಿಯ ಕೇಂದ್ರ ರೈಲ್ವೇ ನಿಲ್ದಾಣದ ಮುಂಭಾಗದಲ್ಲಿರುವ ಹೈಟೆಕ್ ಬಸ್‍ಸ್ಟಾಂಡ್‍ನ ಅವ್ಯವಸ್ಥೆಯ ದೃಶ್ಯಗಳನ್ನು.