ಬಾಗಲಕೋಟೆ: ಹುನಗುಂದ ತಾಲೂಕಿನ ಅಮೀನಗಡ ತಾಂಡಾ, ಕಮತಗಿ ತಾಂಡಾ, ಇಲಕಲ್ಲ ತಾಲೂಕಿನ ಬಲಕುಂದಿ ತಾಂಡಾ, ಚಿಕ್ಕಕೊಡಗಲಿ ತಾಂಡಾ, ಜೋಶಿಗಲ್ಲಿ ತಾಂಡಾ ನಂ.2, ಹೊಸೂರ ತಾಂಡಾ, ಬಾಗಲಕೋಟೆ ತಾಲೂಕಿನ ಬಸವನಗರ ತಾಂಡಾ, ಮುಗಳೊಳ್ಳಿ ತಾಂಡಾ ನಂ.2, ನಾಯನೇಗಲಿ ತಾಂಡಾಗಳಲ್ಲಿ ಹೊಸ ನ್ಯಾಯಬೆಲೆ ಮಂಜೂರಾತಿ ನೀಡಲು ಅರ್ಹ ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಸಹಕಾರಿ ಸಂಘವು ಕನಿಷ್ಠ ಮೂರು ವರ್ಷಗಳಿಂದ ಚಾಲನೆಯಲ್ಲಿದ್ದು, ಹಿಂದಿನ ಎರಡು ವರ್ಷಗಳಲ್ಲಿ ಕನಿಷ್ಠ 2 ಲಕ್ಷ ರೂ.ಗಳ ನಿರಂತರ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬೇಕು. ವಿಕಲಚೇತನ ಹಾಗೂ ತೃತೀಯ ಲಿಂಗದ ವ್ಯಕ್ತಿ ಹೊರತುಪಡಿಸಿ ಇತರೆ ಖಾಸಗಿ ವ್ಯಕ್ತಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವದಿಲ್ಲ.
ಅರ್ಜಿ ನಮೂನೆಯನ್ನು ಆಯಾ ತಹಶೀಲ್ದಾರ ಕಚೇರಿ, ಜಂಟಿ ನಿರ್ದೇಶಕರ ಕಚೇರಿ ಆಹಾರ ಇಲಾಖೆಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಹುನಗುಂದ, ಇಲಕಲ್ಲ ತಹಶೀಲ್ದಾರ ಕಚೇರಿಗೆ ಜನವರಿ 27 ರೊಳಗಾಗಿ ಹಾಗೂ ಬಾಗಲಕೋಟೆ ತಹಶೀಲ್ದಾರ ಕಚೇರಿಗೆ ಜನವರಿ 26 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.