Breaking News

ಹೊಸ ವರ್ಷಾಚರಣೆ: ನಂದಿ ಬೆಟ್ಟದ ಸುತ್ತ ಮೂರು ದಿನ ನಿಷೇಧಾಜ್ಞೆ

Spread the love

ಬೆಂಗಳೂರು : ಬೆಂಗಳೂರು ನಗರದಲ್ಲಿ ರಾತ್ರಿ 10 ಗಂಟೆಯ ನಂತರ ಎಲ್ಲ ಬಾರ್‌, ಪಬ್‌ ಬಂದ್‌ ಮಾಡುವಂತೆ ಆದೇಶ ನೀಡಲಾಗಿದ್ದು, ಟಫ್‌ ರೂಲ್ಸ್‌ ಜಾರಿ ಮಾಡಲಾಗಿದೆ.

ಬೆಂಗಳೂರಿನಲ್ಲಿ ಕಠಿಣ ನಿಯಮ ಜಾರಿಯಲ್ಲಿದೆ ಎಂದು ನೆರೆಯ ನಂದಿಬೆಟ್ಟಕ್ಕೆ ಹೋಗುವ ಪ್ರವಾಸಿಗರ ಉತ್ಸಾಹಕ್ಕೂ ಈಗ ಬೀಗ ಹಾಕಲಾಗಿದೆ.

ನಂದಿ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಜ.3 ರವರೆಗೂ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲಿಸುವಂತೆ ಬೆಂಗಳೂರು ಪೊಲೀಸ್‌ ಆಯುಕ್ತ ಕಮಲ್‌ ಪಂಥ್‌ ಸೂಚನೆ ನೀಡಿದ್ದಾರೆ.

ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆ ಸೇರಿದಂತೆ ಹೊಸ ವರ್ಷಾಚರಣೆಗೆ ಸಾಂಪ್ರದಾಯಿಕವಾಗಿ ಜನ ಸೇರುತ್ತಿದ್ದ ಪ್ರದೇಶಗಳನ್ನು ಈ ವರ್ಷ ಮುಚ್ಚಲಾಗಿದೆ. ಎಲ್ಲ ಫ್ಲೈ ಓವರ್‌ಗಳನ್ನು ರಾತ್ರಿ 10ರ ನಂತರ ಬಂದ್‌ ಮಾಡಲಾಗುತ್ತದೆ. ಸಂಭ್ರಮಾಚರಣೆ ನೆಪದಲ್ಲಿ ಕುಡಿದು ಕುಪ್ಪಳಿಸುವವರ ಮೇಲೆ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ ವಾಹನ ವಶಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಬೆಟ್ಟದ ಮೇಲಿನ ರೂಂ ಬುಕ್ಕಿಂಗ್‌ ರದ್ದುಗೊಳಿಸಲಾಗಿದೆ. ಅದೇ ರೀತಿ ಬೆಂಗಳೂರು ಹೊರ ವಲಯದ ರೆಸಾರ್ಟ್‌ಗಳಿಗೆ ರಾತ್ರಿ 10ರ ನಂತರ ಬಂದ್‌ ಮಾಡಲು ಸೂಚನೆ ನೀಡಲಾಗಿದೆ. ಯಾವುದೇ ರೀತಿಯ ಪಾರ್ಟಿ ಆಯೋಜಿಸಿದರೆ ಲೈಸೆನ್ಸ್‌ ರದ್ದು ಮಾಡುವುದಾಗಿ ತಾಕೀತು ಮಾಡಲಾಗಿದೆ. ಹೀಗಾಗಿ ಈ ವರ್ಷ ಬೆಂಗಳೂರಿನಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಕಳೆ ಕಳೆದುಕೊಂಡಿದೆ.


Spread the love

About Laxminews 24x7

Check Also

ದ್ರಾಕ್ಷಿ ಬೆಳೆಗಾರರಿಂದ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ

Spread the love ವಿಜಯಪುರ :ದ್ರಾಕ್ಷಿ ಬೆಳೆಗಾರರಿಂದ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ* ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕರ್ನಾಟಕ ರೈತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ