ಕಾಸರಗೋಡು: ಕಿರುತೆರೆ ನಟ, ಹಿರಿಯ ರಂಗಭೂಮಿ ಕಲಾವಿದ, ಕತೆಗಾರ, ಕುದುರೆಮುಖ ನಿವೃತ್ತ ನೌಕರ ಶ್ರೀ ವೇಣುಮಿತ್ರ ಕಾಸರಗೋಡು (73) ಅಲ್ಪಕಾಲದ ಅಸೌಖ್ಯದಿಂದ ನಿಧನಹೊಂದಿದ್ದಾರೆ.
ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಕೊಡಮಾಡಿದ ‘ರಂಗ ಭಾಸ್ಕರ’ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳಿಗೆ ಶ್ರೀಯುತರು ಭಾಜನರಾಗಿದ್ದರು.
ಸಾಗರದೀಪ ಸಿನೆಮಾದಲ್ಲೂ ಬಣ್ಣ ಹಚ್ಚಿ ಹಿರಿತೆರೆಯಲ್ಲೂ ಸೈ ಎನಿಸಿಕೊಂಡಿದ್ದರು. ಶ್ರೀಯುತರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ
Laxmi News 24×7