Breaking News

ಆತ್ಮರಕ್ಷಣೆಗಾಗಿ ಸಂಜಯನಗರ ಠಾಣೆ ಇನ್ಸ್‌ಪೆಕ್ಟರ್ ಬಾಲರಾಜ್‌ ಫೈರಿಂಗ್‌ ಮಾಡಿ ಆರೋಪಿ ದಿವಾಕರ್ನ ಅರೆಸ್ಟ್

Spread the love

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಖಾಕಿ ಗನ್ ಸದ್ದು ಮಾಡಿದೆ. ಆರೋಪಿ ಕಾಲಿಗೆ ಗುಂಡು ಹಾರಿಸಿ ಅರೆಸ್ಟ್‌ ಮಾಡಿರುವ ಘಟನೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿ ದಿವಾಕರ್ನನ್ನು ಬಂಧಿಸಲು ತೆರಳಿದ್ದಾಗ ಚಾಕುವಿನಿಂದ ಇರಿದು ಹಲ್ಲೆಗೆ ಯತ್ನಿಸಿದ್ದ. ಹೀಗಾಗಿ ಆತ್ಮರಕ್ಷಣೆಗಾಗಿ ಸಂಜಯನಗರ ಠಾಣೆ ಇನ್ಸ್‌ಪೆಕ್ಟರ್ ಬಾಲರಾಜ್‌ ಫೈರಿಂಗ್‌ ಮಾಡಿ ಆರೋಪಿ ದಿವಾಕರ್ನನ್ನು ಅರೆಸ್ಟ್ ಮಾಡಿದ್ದಾರೆ. ಘಟನೆಯಲ್ಲಿ ಕಾನ್ಸ್‌ಟೇಬಲ್ ಪ್ರದೀಪ್ ಎಂಬಾತನಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಆರೋಪಿ ದಿವಾಕರ್, ಮನೆಗಳಿಗೆ ನುಗ್ಗಿ ಹಣೆಗೆ ಪಿಸ್ತೂಲ್ ಇಟ್ಟು ಡಕಾಯಿತಿ ಮಾಡ್ತಿದ್ದ. ನವೆಂಬರ್ 29 ರಂದು ಯಶವಂತಪುರದಲ್ಲಿ ಡಕಾಯಿತಿ ನಡೆಸಿದ್ದ. ಎರಡು ದಿನದ ಹಿಂದೆ ಅಂದ್ರೆ ಬುಧವಾರ ರಾತ್ರಿ ಆರೋಪಿ ಅರೆಸ್ಟ್ ಮಾಡಲು ತೆರಳಿದ್ದ ಪಿಎಸ್ಐಗೆ ಚಾಕು ಇರಿದು ಎಸ್ಕೇಪ್ ಆಗಿದ್ದ. ಸದ್ಯ ಇಂದು ಐದು ಗಂಟೆ ಸುಮಾರಿಗೆ ಆರೋಪಿ ಅರೆಸ್ಟ್ ಮಾಡಲು ಸಂಜಯ್ ನಗರ ಇನ್ಸ್ಪೆಕ್ಟರ್ ಬಾಲ್ರಾಜ್ ತೆರಳಿದ್ದಾರೆ. ಈ ವೇಳೆ ಮತ್ತೆ ಪೊಲೀಸರ ಮೇಲೆ ಅಟ್ಯಾಕ್ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಹೀಗಾಗಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಇನ್ಸ್ಪೆಕ್ಟರ್ ಬಾಲ್ರಾಜ್ ಸೂಚಿಸಿದ್ದಾರೆ. ಮತ್ತೆ ಅಟ್ಯಾಕ್ ಮಾಡಲು ಆರೋಪಿ ದಿವಾಕರ್ ಮುಂದಾಗಿದ್ದ. ಈ ವೇಳೆ ಆತ್ಮ ರಕ್ಷಣೆಗೆಂದು ಇನ್ಸ್ಪೆಕ್ಟರ್ ಬಾಲ್ರಾಜ್ ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದಾರೆ. 


Spread the love

About Laxminews 24x7

Check Also

ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣವನ್ನೂ ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿ: ಎಂ.ಬಿ ಪಾಟೀಲ್

Spread the loveಬೆಂಗಳೂರು: ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ