ನವದೆಹಲಿ : ಕೇಂದ್ರ ಸರ್ಕಾರವು ಒಮಿಕ್ರಾನ್ ಮಟ್ಟಹಾಕಲು ಲಸಿಕೆಯ ಮೂರನೇ ಡೋಸ್ ಪರಿಚಯಿಸಿದ್ದು, ‘ಮುನ್ನೆಚ್ಚರಿಕೆ ಡೋಸ್’ ಎಂದು ಕರೆದಿದೆ.ಕೋವಿನ್‌ನ ಮುಖ್ಯ ವೈದ್ಯ ಡಾ.ಆರ್.ಎಸ್.ಶರ್ಮಾ, ‘ನೀವು 60 ವರ್ಷ ವಯಸ್ಸಿನವರಾಗಿದ್ದರೆ ಮತ್ತು ಎರಡೂ ಡೋಸ್‌ಗಳನ್ನ ತೆಗೆದುಕೊಂಡಿದ್ದರೆ, ಎರಡನೇ ಡೋಸ್ ಮತ್ತು ನೀವು ನೋಂದಾಯಿಸುವ ದಿನದ ನಡುವಿನ ವ್ಯತ್ಯಾಸವು 9 ತಿಂಗಳುಗಳಿಗಿಂತ ಹೆಚ್ಚಿದ್ರೆ (39 ವಾರಗಳು) ನೀವು ಮೂರನೇ ಡೋಸ್ ತೆಗೆದುಕೊಳ್ಳಲು ಅರ್ಹರು ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ’15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆಯನ್ನ ಜನವರಿ 3 ರಿಂದ ಪ್ರಾರಂಭಿಸಲಾಗುವುದು ಎಂದು ಘೋಷಿಸಿದರು. ಇನ್ನು ಮುಂಚೂಣಿ ಮತ್ತು ಆರೋಗ್ಯ ಕಾರ್ಯಕರ್ತರನ್ನ ಹೊರತುಪಡಿಸಿ, 60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ‘ಮುನ್ನೆಚ್ಚರಿಕೆ ಡೋಸ್ʼ ನೀಡುವುದಾಗಿ ಘೋಷಿಸಿದರು.
Laxmi News 24×7