ಬೆಂಗಳೂರು: ರಾಜ್ಯದಲ್ಲಿಂದು 1,925 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 23,474 ಕ್ಕೇರಿಕೆಯಾಗಿದೆ. ಇಂದು ಸಹ ಮಹಾಮಾರಿಗೆ 38 ಮಂದಿಗೆ ಬಲಿಯಾಗಿದ್ದಾರೆ. ರಾಜಧಾನಿ ಮತ್ತೆ ಕೊರೊನಾ ಅಟ್ಟಹಾಸಕ್ಕೆ ತತ್ತರಿಸಿದ್ದು, ಇಂದು 1,235 ಮಂದಿಗೆ ಕೊರೊನಾ ಸೋಂಕು ತಗುಲಿದೆ.

23,474 ಪ್ರಕರಣಗಳಲ್ಲಿ 13,250 ಸಕ್ರಿಯ ಕೇಸ್ ಗಳಿವೆ. ಇಂದು 603 ಮಂದಿ ಡಿಸ್ಚಾರ್ಜ್ ಆಗಿದ್ದು, 38 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 243 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಇಂದು ಬಿಡುಗಡೆಯಾದ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ 1,235, ದಕ್ಷಿಣ ಕನ್ನಡ 147, ಬಳ್ಳಾರಿ 90, ವಿಜಯಪುರ 51, ಕಲಬುರಗಿ 49, ಉಡುಪಿ 45, ಧಾರವಾಡ 45, ಬೀದರ್ 29, ಮೈಸೂರು 25, ಕೊಪ್ಪಳ 22, ಉತ್ತರ ಕನ್ನಡ 21, ಚಾಮರಾಜನಗರ 19, ಹಾವೇರಿ 15, ಹಾಸನ 14, ಚಿಕ್ಕಬಳ್ಳಾಪುರ 13, ತುಮಕೂರು 13, ಕೋಲಾರ 13, ಬೆಳಗಾವಿ 11, ದಾವಣಗೆರೆ 11, ರಾಯಚೂರು 10, ಮಂಡ್ಯ 10, ಚಿಕ್ಕಮಗಳೂರು 9, ಶಿವಮೊಗ್ಗ 8, ಗದಗ 7, ರಾಮನಗರ 6, ಬಾಗಲಕೋಟೆ 4 ಮತ್ತು ಚಿತ್ರದುರ್ಗದಲ್ಲಿ ಒಂದು ಪ್ರಕರಣ ಬೆಳಕಿಗೆ ಬಂದಿದೆ.ಇಂದು ಒಟ್ಟು 38 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಬೆಂಗಳೂರು ನಗರದಲ್ಲಿ 16, ಬೀದರ್ 9, ಬೆಳಗಾವಿ 2, ಧಾರವಾಡ 1, ದಾವಣಗೆರೆ 2, ಕಲಬುರಗಿ 2, ದಕ್ಷಿಣ ಕನ್ನಡ 1, ಮೈಸೂರು 1, ತುಮಕೂರು 1, ಬಳ್ಳಾರಿ 1, ಚಿಕ್ಕಬಳ್ಳಾಪುರ 1 ಮತ್ತು ಹಾಸನ ಜಿಲ್ಲೆಯಲ್ಲಿ ಒಬ್ಬರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.
Laxmi News 24×7