Breaking News

ದುಡ್ಡು ಕೊಟ್ರೆ ರಾಜ್ಯಕ್ಕೆ ಪಾಸ್ ಇಲ್ಲದಿದ್ರು ಸಿಗುತ್ತೆ ಎಂಟ್ರಿ

Spread the love

ಬೆಂಗಳೂರು: ತಮಿಳುನಾಡಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದು, ಅಲ್ಲಿನ ಜನಕ್ಕೆ ಪಾಸ್ ಇದ್ದರೆ ಮಾತ್ರ ಕರ್ನಾಟಕಕ್ಕೆ ಪ್ರವೇಶ ಸಿಗುತ್ತದೆ. ಆದರೆ ಅಲ್ಲಿನ ಪೊಲೀಸರಿಗೆ ಸ್ವಲ್ಪ ಹಣ ಕೊಟ್ಟರೆ ಯಾವುದೇ ಪಾಸ್ ಇಲ್ಲದಿದ್ದರೂ ರಾಜ್ಯಕ್ಕೆ ಎಂಟ್ರಿ ಕೊಡಿಸುತ್ತಾರೆ. ಕರ್ನಾಟಕ ಸರ್ಕಾರದ ನಿರ್ಲಕ್ಷ ತಮಿಳುನಾಡು ಪೊಲೀಸರಿಗೆ ವರದಾನವಾಗಿದೆ.

ಬೆಂಗಳೂರು ಹೊರವಲಯ ಆನೇಕಲ್ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ತಳಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರಿಗೆ ಹಣ ನೀಡಿದ್ರೆ ಕರ್ನಾಟಕ ಪ್ರವೇಶಿಸಬಹುದು. ತಮಿಳುನಾಡಿನಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆ ಕರ್ನಾಟಕ ಸರ್ಕಾರ ಅಲ್ಲಿನ ಜನ ರಾಜ್ಯ ಪ್ರವೇಶಿಸಲು ಈ ಪಾಸ್ ಹಾಗೂ ಕ್ವಾರಂಟೈನ್ ಕಡ್ಡಾಯ ಮಾಡಿದೆ. ಆದರೆ ಆನೇಕಲ್ ತಾಲೂಕಿನ ಸುತ್ತ ತಮಿಳುನಾಡಿನಿಂದ ಬರುವ ಅನೇಕ ರಸ್ತೆಗಳಿದ್ದು, ಜಿಲ್ಲಾಡಳಿತ ಅತ್ತಿಬೆಲೆಯಲ್ಲಿ ಮಾತ್ರ ಚೆಕ್ ಪೋಸ್ಟ್ ನಿರ್ಮಿಸಿ ತಪಾಸಣೆ ನಡೆಸಲಾಗುತ್ತಿದೆ.

ಸರ್ಜಾಪುರ, ಸೋಲುರೂ, ಬಳ್ಳೂರು ಇನ್ನು ಕೆಲವು ಕಡೆಗಳಲ್ಲಿ ಕನಿಷ್ಠ ಬ್ಯಾರಿಕೇಡ್ ಕೂಡ ಹಾಕಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ತಮಿಳುನಾಡಿನ ಜನ ಕಳ್ಳ ದಾರಿಯಲ್ಲಿ ರಾಜ್ಯ ಪ್ರವೇಶಿಸುತ್ತಿದ್ದಾರೆ. ಆದ್ರೆ ತಮಿಳುನಾಡು ಸರ್ಕಾರ ಕರ್ನಾಟಕ ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲೂ ಚೆಕ್ ಪೋಸ್ಟ್ ನಿರ್ಮಿಸಿ ಪೊಲೀಸರನ್ನು ನಿಯೋಜಿಸಿದೆ. ಚೆಕ್‍ಪೋಸ್ಟ್ ಗಳಲ್ಲಿ ನಿಯೋಜಿತ ತಮಿಳುನಾಡು ಪೊಲೀಸರು ಈಗ ಹಣ ಮಾಡುವ ದಂಧೆಯಲ್ಲಿ ನಿರತರಾಗಿದ್ದಾರೆ.

ಹಣ ವಸೂಲಿಗೆಂದೇ ಓರ್ವನನ್ನು ಚೆಕ್ ಪೋಸ್ಟ್ ನಲ್ಲಿ ಇಟ್ಟುಕೊಂಡಿದ್ದು ಆತನಿಂದ ಸಾವಿರ ಗಟ್ಟಲೆ ಹಣ ವಸೂಲಿ ಮಾಡುತ್ತಿದ್ದಾರೆ. ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ತಮಿಳುನಾಡು ಪೊಲೀಸರ ಲಂಚಾವತಾರ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಪೊಲೀಸ್ – ಅವರ ಹತ್ತಿರ ಇದೆ ಹೋಗಿ
ವಾಹನ ಸವಾರ – ಸರ್ ಅವರ ಹತ್ತಿರ ಇಲ್ಲ ಅಂತೆ

ಪೊಲೀಸ್ – ಕೊಡಿ.
ವಾಹನ ಸವಾರ – ಅದಕ್ಕೆ ಫಸ್ಟ್ ಕೇಳ್ಬಿಟ್ಟೆ

ಪೊಲೀಸ್ – ಎಷ್ಟ್ ಕೊಡ್ತೀರಾ?
ವಾಹನ ಸವಾರ – ಸರ್ 100… 100 ಅಂತಾ ಹೇಳಿದ್ದಾರೆ.

ಪೊಲೀಸ್ – ಇಲ್ಲಿ 2 ಚೆಕ್‍ಪೋಸ್ಟ್ ಇದೆ.
ವಾಹನ ಸವಾರ – ಅದೇ ಅವರಿಗೆ 100, ನಿಮಗೆ 100

ಪೊಲೀಸ್ – ನನಗೆ 200 ಕೊಡಪ್ಪ
ವಾಹನ ಸವಾರ – ಸರ್ ನೋಡಿ ಸರ್ ಆನೇಕಲ್‍ನವರೇ ಸರ್.

ಪೊಲೀಸ್ – ನೋಡು ಸರ್‍ಗೆ ಕೊಟ್ಟುಬಿಡ್ತಿನಿ. ಹೋಗು ಅಲ್ಲಿ 100 ರೂ. ಕೊಟ್ಟು ಹೋಗು.
ವಾಹನ ಸವಾರ – ಸರ್ 250 ರೂ. ತೆಗೆದುಕೊಂಡಿದ್ದೀರಿ.

ಪೊಲೀಸ್ – ಇಲ್ಲ 300 ರೂ. ಇದೆ.. ಅಲ್ಲಿ ಹೇಳಿ ಕೊಟ್ಟು ಹೋಗು
ವಾಹನ ಸವಾರ – ಅಲ್ಲಿ ಕೊಡಬೇಕಾ?

ಪೊಲೀಸ್ – ಎಷ್ಟೋತ್ತು ಆಗುತ್ತೆ?
ವಾಹನ ಸವಾರ – ಸರ್ ಒಂದೂವರೆ ಗಂಟೆ ಆಗಬಹುದು ಸರ್.

ಪೊಲೀಸ್ – ತಮಿಳುನಾಡಲ್ಲ 31 ರವರೆಗೆ ಲಾಕ್‍ಡೌನ್ ಇದೆ ಅದಕ್ಕೆ.. ಏನು ಪ್ರಾಬ್ಲಂ ಇಲ್ಲ. ಎಷ್ಟೋತ್ತಿಗೆ ಬರ್ತಿಯಾ..?
ವಾಹನ ಸವಾರ – ಒಂದು 8 ಗಂಟೆಯೊಳಗೆ ಬರ್ತಿ

creditsimage to public tv


Spread the love

About Laxminews 24x7

Check Also

‘I Am god’ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ….ಯುವ ಪ್ರತಿಭೆ ರವಿ ಗೌಡ ಹೊಸ ಸಿನಿಮಾಗೆ ಸಾಥ್.

Spread the loveಬೆಂಗಳೂರು:ರಾಜಕೀಯ ಜಂಜಾಟಗಳ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುವು ಮಾಡಿಕೊಂಡು ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಅಂತೆಯೆ ಅವರು ತಮ್ಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ