Breaking News

40% ಕಮಿಷನ್ ವಿಚಾರವಾಗಿ ಸದನದಲ್ಲಿ ಗಂಭೀರ ಚರ್ಚೆ ನಡೆಸಲು ಕಾಂಗ್ರೆಸ್ ತೀರ್ಮಾನ

Spread the love

ಬೆಳಗಾವಿ : ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬುಧವಾರ ಬೆಳಗ್ಗೆ ನಡೆಸಿ, ಸುವರ್ಣ ಸೌಧದಲ್ಲಿ ಸರಕಾರದ ವಿರುದ್ಧ ಹೋರಾಟ ನಡೆಸುವ ಬಗ್ಗೆ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.

ಎಪಿಎಂಸಿ ಕಾಯಿದೆ ವಾಪಸು ಪಡೆಯುವಂತೆ ನಿಲುವಳಿ ಸೂಚನೆ ಮಂಡನೆ ಮಾಡಲು ನಿರ್ಧರಿಸಲಾಗಿದೆ.

 

ಭೂ ಸುಧಾರಣಾ ತಿದ್ದುಪಡಿ ಕಾಯಿದೆ, ಗೋಹತ್ಯೆ ನಿಷೇಧ ಕಾಯಿದೆ ವಾಪಸು ಪಡೆಯುವಂತೆ ಒತ್ತಾಯ ಮಾಡುವುದು, ಕರೋನದಿಂದ ಸತ್ತವರಿಗೆ ಪರಿಹಾರ ಕೊಡುವ ವಿಚಾರ, ಮತಾಂತರ ತಿದ್ದುಪಡಿ ವಿಧೇಯಕ ಸರ್ಕಾರ ತಂದ್ರೆ ವಿರೋಧ ಮಾಡುವುದು, 40% ಕಮಿಷನ್ ಆರೋಪ,ಬಿಟ್ ಕಾಯಿನ್ ವಿಚಾರ ಪ್ರಸ್ತಾಪ ಮಾಡುವುದಕ್ಕೆ ನಿರ್ಧರಿಸಲಾಗಿದೆ.

ಪರಿಷತ್ ಮತ್ತು ವಿಧಾನ ಸಭೆಯಲ್ಲಿ ಯಾರು ಪ್ರಸ್ತಾಪ ಮಾಡಬೇಕು, ಯಾರು ಚರ್ಚೆ ಮಾಡಬೇಕು ಅಂತ ಇವತ್ತಿನ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನೂತನ ವಿಧಾನಪರಿಷತ್ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು.

ಕೆಲವು ಕ್ಷೇತ್ರಗಳಲ್ಲಿ ಅನಿರೀಕ್ಷಿತ ಸೋಲಾಗಿರುವ ಬಗ್ಗೆ ಕೈ ನಾಯಕರ ಬೇಸರ ವ್ಯಕ್ತಪಡಿಸಿದರು. ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ ಸೋಲಿನ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ನಿನ್ನೆ ವಿಧಾನಪರಿಷತ್ ಕಲಾಪದಲ್ಲಿ ಈಶ್ವರಪ್ಪ ರೋಲ್ಯಾಕ್ಸ್ ವಾಚ್ ಪ್ರಕರಣ ಪ್ರಸ್ತಾಪಿಸಿದ್ದರು, ಅದಕ್ಕೆ ಸಿ ಎಂ ಇಬ್ರಾಹಿಂ.ತಿರುಗೇಟು ನೀಡಿದ್ದರು.

ಸಭೆಯಲ್ಲಿ ನಂಜುಡಪ್ಪ ವರದಿ ಅನುಷ್ಠಾನದ ಬಗ್ಗೆ ಚರ್ಚೆ ಮಾಡಿ, ವರದಿ ಜಾರಿ ವಿಚಾರ ಚರ್ಚೆಗೆ ಅವಕಾಶ ಕೇಳಲು ನಿರ್ಧಾರ ಮಾಡಲಾಗಿದೆ. ನಂಜುಂಡಪ್ಪ ವರದಿ ವಿಚಾರವಾಗಿ ನಿಲುವಳಿ ಸೂಚನೆ ಮಂಡಿಸುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬಾಕಿ ಇರುವ 3 ಲಕ್ಷ ಕೋಟಿ ವಿಚಾರವಾಗಿಯೂ ಚರ್ಚೆ ನಡೆಸಲಾಗಿದೆ.

40% ಕಮಿಷನ್ ವಿಚಾರವಾಗಿ ಸದನದಲ್ಲಿ ಗಂಭೀರ ಚರ್ಚೆ ನಡೆಸಲು ತೀರ್ಮಾನ ಮಾಡಲಾಗಿದೆ.

40% ಕಮಿಷನ್ ವಿಚಾರವಾಗಿಯೂ ನಿಲುವಳಿ ಸೂಚನೆ ನೀಡಿ ಎಂದು ಹಿರಿಯ ನಾಯಕರು ಸಲಹೆ ನೀಡಿದ್ದಾರೆ.

ಸ್ಪೀಕರ್ ಅನುಮತಿ ನೀಡದೇ ಇದ್ದರೆ ಪ್ರತಿಭಟನೆ ಹಾದಿ ಹಿಡಿಯಬೇಕು. ನಾಳೆಯಿಂದ ಬೆಂಗಳೂರು ಮಾದರಿಯಲ್ಲಿ ದಿನಕ್ಕೊಂದು ಪ್ರತಿಭಟನಾ ಮೆರವಣಿಗೆಗೆ ನಿರ್ಧಾರ ಮಾಡಲಾಗಿದೆ.

ಪರಿಷತ್ ಕಲಾಪದಲ್ಲಿ ಜಾಡಿಸಿ ಬಿಸಾಡಿ ಅಂತ ಸಲಹೆ ಕೊಟ್ಟ ಸಿದ್ದರಾಮಯ್ಯ.

ಆ ಈಶ್ವರಪ್ಪನಿಗೆ ಜಾಡಿಸಿ ಅಂತ ಸಿ ಎಂ ಇಬ್ರಾಹಿಂ ಗೆ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು, ಪ್ರತಿಕ್ರಿಯಿಸಿದ ಸಿ ಎಂ ಇಬ್ರಾಹಿಂ ನಿನ್ನೆಯೆ ಜಾಡಿಸಿದ್ದೇನೆ ಎಂದರು.


Spread the love

About Laxminews 24x7

Check Also

ಬೆಣ್ಣೆನಗರಿಗೆ ಬರಲಿದೆ ಐಟಿ ಪಾರ್ಕ್

Spread the loveದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು. ಪ್ರಗತಿಯತ್ತ ಸಾಗುತ್ತಿರುವ ದಾವಣಗೆರೆಯಲ್ಲಿ ಐಟಿಬಿಟಿ ಕಂಪನಿಗಳು ಕರೆತರಲು ಇಲ್ಲಿಲ್ಲದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ