ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲು ಇಲ್ಲಿನ ಆದರ್ಶ ನಗರದ ಅವರ ನಿವಾಸದ ಮುಂದೆ ಮಂಗಳವಾರ ಬೆಳಿಗ್ಗೆಯಿಂದಲೇ ಸಾಕಷ್ಟು ಜನ ಸೇರಿದ್ದರು.
ಕೋವಿಡ್ ಭೀತಿಯ ಕಾರಣದಿಂದ ಸರ್ಕಾರ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಹೇಳಿದೆ.
ಆದರೆ, ಮನವಿ ಸಲ್ಲಿಸಲು ಬಂದಿದ್ದ ವಿವಿಧ ಸಮಾಜದ ಮುಖಂಡರು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಅದೆಲ್ಲವನ್ನೂ ಮರೆತಿದ್ದರು. ಖುದ್ದು ಮುಖ್ಯಮಂತ್ರಿಯವರನ್ನೇ ಭೇಟಿಯಾಗಿ ಮನವಿ ಕೊಡಲು ಸಾಕಷ್ಟು ಜನ ಕಾಯುತ್ತಿದ್ದರು. ಇನ್ನೂ ಕೆಲವರು ಸಿ.ಎಂ ಆಪ್ತ ಸಹಾಯಕರ ಭೇಟಿಗೆ ಅವಕಾಶ ಸಿಕ್ಕರೆ ಸಾಕು ಎಂದು ಪರದಾಡುತ್ತಿದ್ದ ಚಿತ್ರಣ ಕಂಡುಬಂತು.
ಬೊಮ್ಮಾಯಿ ಅವರು 9.30ಕ್ಕೆ ಮನೆಯಿಂದ ಹೊರಡುತ್ತಾರೆ ಎನ್ನುವ ವಿಷಯ ಮೊದಲೇ ತಿಳಿದಿದ್ದ ಅನೇಕರು ಬೆಳಿಗ್ಗೆ 7 ಗಂಟೆಯಿಂದಲೇ ಮನೆಮುಂದೆ ಜಮಾಯಿಸಿದ್ದರು. ಅನ್ನೂ ಅನೇಕ ಜನ ಅವರ ಮನೆಯ ಹೊರಾಂಗಣದಲ್ಲಿ ಅಂತರ ಮರೆತು ಕಾಯುತ್ತಿದ್ದರು. ನೂಕುನುಗ್ಗಲಿನ ನಡುವೆಯೇ ಮನೆಯಿಂದ ಹೊರಬಂದ ಮುಖ್ಯಮಂತ್ರಿ ಒಂದೆರಡು ನಿಮಿಷಗಳಲ್ಲಿ ಎಲ್ಲರಿಂದ ಮನವಿ ಸ್ವೀಕರಿಸಿ ಹೊರಟು ಹೋದರು.
Laxmi News 24×7