ತೀರ್ಥಹಳ್ಳಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಒಂದು ಮತಕ್ಕೆ ₹ 25 ಸಾವಿರ ಕೊಡುವ ಸ್ಥಿತಿ ಇರುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಬಳಿ ಹೇಳಿಕೊಂಡಿದ್ದರು ಎಂದು ಜೆಡಿಯು ಅಧ್ಯಕ್ಷ ಮಹಿಮ ಪಟೇಲ್ ಬಹಿರಂಗಪಡಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಶಿವಮೊಗ್ಗದಿಂದ ಯಡಿಯೂರಪ್ಪ ಅವರ ಜತೆ ಈಚೆಗೆ ಬೆಂಗಳೂರಿಗೆ ಪ್ರಯಾಣ ಮಾಡುವಾಗ ಈ ವಿಷಯ ಪ್ರಸ್ತಾಪಿಸಿದ್ದರು. ಮತದಾರರೇ ಭ್ರಷ್ಟರಾಗಿದ್ದಾರೆ ಎಂದು ಬೇಸರ ತೋಡಿಕೊಂಡಿದ್ದರು ಎಂದರು.
ಭಾರತದಲ್ಲಿ ಚುನಾವಣಾ ಸುಧಾರಣೆ ತರುವ ಆವಶ್ಯಕತೆ ಇದೆ. ಪ್ರಜೆಗಳು ಭ್ರಷ್ಟಾಚಾರಕ್ಕೆ ಮೊದಲ ಏಣಿ ಹಾಕಿಕೊಡುತ್ತಿದ್ದಾರೆ. ಉಚಿತವಾಗಿ ಏನು ಲಾಭ ಎನ್ನುವ ಯೋಚನೆಗಳು ಆರಂಭವಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.
Laxmi News 24×7