ಬೆಂಗಳೂರು : ರಾಜ್ಯ ಸರ್ಕಾರವು (State Government) ಪಡಿತರ ಚೀಟಿದಾರರಿಗೆ (Ration card holders) ಸಿಹಿಸುದ್ದಿ ನೀಡಿದ್ದು, ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು (Garib Kalyan Yojana) ಕೇಂದ್ರ ಸರ್ಕಾರ ಮತ್ತೆ 4 ತಿಂಗಳು ವಿಸ್ತರಣೆ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೀಡುತ್ತಿರುವ ಆಹಾರ ಧಾನ್ಯದಲ್ಲಿ ಯಾವುದೇ ಕಡಿತ ಇಲ್ಲ ಎಂದು ಆಹಾರ ಸಚಿವ ಉಮೇಶ್ ಕತ್ತಿ (Minister Umesh Kaththi) ಹೇಳಿದ್ದಾರೆ.
ವಾಟರ್ ಚೆಸ್ಟ್ನಟ್ ಅನೇಕ ರೋಗಗಳಿಗೆ ಪರಿಹಾರ, ಚಳಿಗಾಲದಲ್ಲಿ ತಿಂದರೆ ಅದ್ಭುತ ಪ್ರಯೋಜನೆ
ಕೇಂದ್ರ ಸರ್ಕಾರವು ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ನಾಲ್ಕು ತಿಂಗಳು ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ 4.28 ಕೋಟಿ ಜನರಿಗೆ ಅನುಕೂಲವಾಗಲಿದೆ. ಕೇಂದ್ರದ ಜೊತೆಗೆ ರಾಜ್ಯ ಸರ್ಕಾರವೂ ಕೈ ಜೋಡಿಸಿದ್ದು, ರಾಜ್ಯದ ಪ್ರತಿ ಫಲಾನುಭವಿಗೂ 10 ಕೆಜಿ ಅಕ್ಕಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕುಟುಂಬಗಳಿಗೆ ಉಚಿತ ಆಹಾರ ಧಾನ್ಯ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 2020 ರ ಮಾರ್ಚ್ ನಲ್ಲಿ ಈ ಯೋಜನೆ ಜಾರಿಗೆ ತಂದಿತ್ತು.
Laxmi News 24×7