ಬೆಂಗಳೂರು : ತೆರಿಗೆ ಪಾವತಿಸದೆ ಕಳ್ಳಾಟ ನಡೆಸುತ್ತಿದ್ದ ಹಿನ್ನೆಲೆ ನಗರದ ಪ್ರತಿಷ್ಟಿತ ಮಂತ್ರಿ ಮಾಲ್‌ಗೆ ಮತ್ತೆ ಬೀಗ ಬೀದ್ದಿದೆ. ಅನೇಕ ಬಾರಿ ಡೆಡ್‌ಲೈನ್ ನೀಡಿದ್ರೂ ಆಸ್ತಿ ತೆರಿಗೆಯನ್ನ ಮಂತ್ರಿ ಮಾಲ್ ಆಡಳಿತ ಮಂಡಳಿ ಪಾವತಿಸಿರಲಿಲ್ಲ. ನಿನ್ನೆ ಮಂತ್ರಿ ಮಾಲ್ ಆಡಳಿತ ಮಂಡಳಿಗೆ ನೀಡಿದ್ದ ಡೆಡ್‌ಲೈನ್ ಮುಕ್ತಾಯವಾಗಿದೆ. ಹೀಗಾಗಿ, ಇಂದು ಮತ್ತೆ ಬೀಗ ಜಡಿಯಲು ಬಿಬಿಎಂಪಿ ಮುಂದಾಗಿದೆ.
ಈ ಹಿಂದೆಯೂ ಕೂಡ ಬಿಬಿಎಂಪಿ ಹಲವು ಬಾರಿ ಡೆಡ್‌ಲೈನ್ ನೀಡಿದ್ರೂ ಮಂತಿ ಮಾಲ್ ಆಡಳಿತ ಮಂಡಳಿ ನಿರ್ಲಕ್ಷ್ಯತೆ ತೋರಿತ್ತು. 2018ರಿಂದ ಬಿಬಿಎಂಪಿಗೆ ಆಸ್ತಿ ತೆರಿಗೆ ಕಟ್ಟದೆ ವಂಚಿಸಿದೆ. ಇನ್ನು 2018ರಿಂದ ಈವರೆಗೆ 27 ಕೋಟಿ ಹಣವನ್ನ ಮಾಲ್ ಬಾಕಿ ಉಳಿಸಿಕೊಂಡಿದೆ.
ಹೀಗಾಗಿ, ಪಾಲಿಕೆ ನವೆಂಬರ್-15ರಂದು ಮಂತ್ರಿ ಮಾಲ್ನ ಕ್ಲೋಸ್ ಮಾಡಿದ್ದರು. ಒಂದೇ ವರ್ಷದಲ್ಲಿ ಬಿಬಿಎಂಪಿ ಮೂರನೇ ಬಾರಿ ಬೀಗ ಹಾಕಿದೆ. ಬಿಬಿಎಂಪಿ ಜಂಟಿ ಆಯುಕ್ತ ಶಿವಸ್ವಾಮಿ ನೇತೃತ್ವದಲ್ಲಿ ಮಂತ್ರಿ ಮಾಲ್‌ಗೆ ಬೀಗ ಹಾಕಲಾಗಿದೆ. ತೆರಿಗೆ ಕಟ್ಟದ ಹಿನ್ನೆಲೆ ಬಿಬಿಎಂಪಿ ಮುಲಾಜಿಲ್ಲದೆ ಈ ಕ್ರಮಕೈಗೊಂಡಿದೆ.
ಮಂತ್ರಿ ಮಾಲ್ ತೆರಿಗೆ ಪಾವತಿ ಮೊತ್ತ : ಇನ್ನು 27 ಕೋಟಿ ಹಣ ತೆರಿಗೆ ಬಾಕಿ ಇದ್ರೂ ನಾಲ್ಕೈದು ಕೋಟಿ ಮಾತ್ರ ಮಂತ್ರಿ ಮಾಲ್ ಕಟ್ಟಿದೆ. ಕಳೆದ ಮೂರು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಯನ್ನೇ ಮಾಡಿಲ್ಲ. ಅಲ್ಲದೆ, ಮೂರು ವರ್ಷದ ಆಸ್ತಿ ತೆರಿಗೆ ₹36 ಕೋಟಿ ಕಟ್ಟಬೇಕಿತ್ತು. ಅಕ್ಟೋಬರ್‌ನಲ್ಲಿ ಬೀಗ ಹಾಕಿದಾಗ ತಾತ್ಕಾಲಿಕವಾಗಿ 5 ಕೋಟಿ ಡೆಪಾಸಿಟ್ ಮಾಡಿದ್ರು. ಉಳಿದ ಬಾಕಿ 31 ಕೋಟಿಯನ್ನ ಅಕ್ಟೋಬರ್ ಅಂತ್ಯಕ್ಕೆ ಪಾವತಿ ಮಾಡೋದಾಗಿ ಡೆಡ್‌ಲೈನ್ ಪಡೆದಿದ್ರು.